
ಪಟ್ಟಣದ ಉಪ್ಪಲದಿನ್ನಿ ಕ್ರಾಸ್ ಹತ್ತಿರದಲ್ಲಿ ರಾಷ್ಟ್ರೀಯ ಹೆದ್ದಾರಿ 218 ರ ಕೊಲ್ಹಾರ ಪಟ್ಟಣಕ್ಕೆ ಒಳಬರುವ ವಿಭಜಕ ಒಡೆದು ವಿಭಜಕದ ದೊಡ್ಡ ಗಾತ್ರದ ಕಲ್ಲುಗಳು ಹೆದ್ದಾರಿಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಕಂಡ ಕೊಲ್ಹಾರ ಠಾಣಾ ಪಿಎಸ್ಐ ಪ್ರವೀಣ ಗರೇಬಾಳ ಕಲ್ಲುಗಳನ್ನು ತೆರುವುಗೊಳಿಸಿ ಮಾನವಿಯತೆ ಮೆರೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದದ್ದ ಕಲ್ಲುಗಳಿಂದ ಅಪಘಾತ ಸಂಭವಿಸಿ ಜೀವ ಹಾನಿಯಾಗುವ ಸಂಭವವು ಇತ್ತು, ಇದನ್ನು ಮನಗಂಡ ಪಿಎಸ್ಐ ಪ್ರವೀಣ ಗರೇಬಾಳ ಕಲ್ಲುಗಳನ್ನು ರಸ್ತೆ ಬದಿಗೆ ಸರಿಸಿ ಆಗುವ ಮುಂದೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪಟ್ಟಣದ ನಾಗರಿಕರು ವಿಭಜಕದ ದೊಡ್ಡ ಕಲ್ಲುಗಳು ಬಿದ್ದಿರುವ ವಿಷಯ ಗಮನಕ್ಕೆ ತಂದಿದ್ದರು ಕೂಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಂಜಸವಾದ ಸ್ಪಂದನೆ ನೀಡಿರಲಿಲ್ಲ.
ಜನಾನುರಾಗಿ ಹೆಸರು ಪಡೆದಿರುವ ಪಿಎಸ್ಐ ಪ್ರವೀಣ ಗರೇಬಾಳ ಮಂಗಳವಾರ ರಾತ್ರಿ ಖುದ್ದು ಸ್ಥಳಕ್ಕೆ ತೆರಳಿ ಉದ್ಯಮಿ ಹಾಗೂ ಸಮಾಜ ಸೇವಕ ಹಸನಡೊಂಗ್ರಿ ಗಿರಗಾಂವಿ ಅವರಿಗೆ ಕರೆ ಮಾಡಿ ಜೆಸಿಬಿ ತರೆಸಿ ಕಲ್ಲುಗಳನ್ನು ತೆರುವುಗೊಳಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.