Tuesday, 13th May 2025

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅನುಕರಣೆ: ದೂರು ದಾಖಲು

ವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ವಕೀಲರೊಬ್ಬರು ದೆಹಲಿಯ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಸಂಸತ್ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಯಾನರ್ಜಿ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರನ್ನು ಅನುಕರಿಸಿದರು.

ಈ ಸಂಬಂಧ ಅಭಿಷೇಕ್ ಗೌತಮ್ ಎಂಬ ವಕೀಲರು ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಅದನ್ನು ಸ್ವೀಕರಿಸಿ ದ್ದಾರೆ. ತಮ್ಮ ದೂರಿನಲ್ಲಿ ಅಭಿಷೇಕ್ ಅವರು ಉಪಾಧ್ಯಕ್ಷರಿಗೆ ಅವಮಾನ ಮಾಡಿದ್ದಾರೆ ಎಂದಿದ್ದು, ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದ್ದಾರೆ.

ಏತನ್ಮಧ್ಯೆ, ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯವನ್ನು ಪ್ರಸ್ತಾಪಿಸುವಾಗ ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಗದ್ದಲವನ್ನು ಮುಂದುವರೆಸಿದ ನಂತರ ರಾಜ್ಯಸಭೆಯನ್ನು ಊಟದ ಪೂರ್ವದ ಅವಧಿಯಲ್ಲಿ ಎರಡು ಬಾರಿ ಮುಂದೂಡಲಾಯಿತು. ಸ್ಪೀಕರ್ ಮತ್ತು ಸಭಾಪತಿಯವರನ್ನು ಸಂಸದ ರೊಬ್ಬರು ಮಿಮಿಕ್ರಿ ಮಾಡಿದ್ದನ್ನು ಮತ್ತು ಕೃತ್ಯದ ವಿಡಿಯೋಗ್ರಫಿಯನ್ನು ಪ್ರಸ್ತಾಪಿಸಿದ ಸಭಾಪತಿ, ಇದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಮಿತಿ ಇರಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *