Wednesday, 14th May 2025

ಕುಮಾರಸ್ವಾಮಿ ದ್ವೇಷ, ಅಸೂಯೆಯಿಂದ ಮಾತನಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Siddaramaiah

ಕೊಪ್ಪಳ: ಮಾಜಿ ಸಿಎಂ ಕುಮಾರಸ್ವಾಮಿಗೆ ದ್ವೇಷ ಅಸೂಯೆಯಿಂದ ದಿನವೂ ಟೀಕೆ ಮಾಡುತ್ತಿದ್ದಾರೆ. ವಿದ್ಯುತ್ ಕಳ್ಳತನ ಮಾಡಿದವರಿಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಕೊಪ್ಪಳದ ಬಸಾಪೂರ ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ವಿದ್ಯುತ್ ಕಳ್ಳತನ ಮಾಡಿ, ದಂಡ ಬೇರೆ ಕಟ್ಟಿ ದ್ದಾರೆ. ಅವರಿಗೆ ನೈತಿಕತೆ ಇದೆಯಾ? ನನ್ನ ಬಗ್ಗೆ ಮಾತನಾಡಲು ಅವರ ಬಳಿ ಸಾಕ್ಷಿ ಇದೆಯಾ? ಯತೀಂದ್ರ ಫೋನ್ ನಲ್ಲಿ ದುಡ್ಡಿನ ವ್ಯವಹಾರ ಮಾತಾಡಿ ದ್ದಾರಾ? ಎಂದು ಪ್ರಶ್ನಿಸಿದರು. ‌

ಯತೀಂದ್ರ ಸಿಎಎಸ್ ಆರ್ ಫಂಡ್ ಬಗ್ಗೆ ಮಾತಾಡಿದ್ದಾರೆ. ಕುಮಾರಸ್ವಾಮಿ ತಮ್ಮ ಕಾಲದಲ್ಲಿ ದುಡ್ಡು ಮಾಡಿರೊದು ಜಗತ್ತಿಗೆ ಗೊತ್ತಿದೆ ಎಂದರು.

ಗ್ಯಾರಂಟಿ ಯೋಜನೆ ವಿರೋದ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಇದೀಗ ಅಂತ ಯೋಜನೆ ಘೊಷಣೆ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರ ದಲ್ಲಿ ಇರುವ ರಾಜ್ಯದಲ್ಲಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಮದ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿಲ್ಲ. ಈಗ ಮಾಡುತ್ತೇವೆ ಎನ್ನು ತ್ತಿದ್ದಾರೆ. ಆದರೆ, ಬಿಜೆಪಿವರು ಯಾವತ್ತೂ ನುಡಿದಂತೆ ನಡೆಯುವುದಿಲ್ಲ.‌ ಇವರ ಮಾತು ಜನ ನಂಬುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇನ್ನು ಮಾಜಿ ಸಚಿವ ಶ್ರೀರಾಮುಲು ಮಗಳ ಮದುವೆಗೆ ಆಮಂತ್ರಣ ಕೊಡೊಕೆ ಬಂದಿದ್ದರು ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *