Saturday, 17th May 2025

ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ಚತುರರಲ್ಲ: ಸಚಿವ ರಾಜಣ್ಣ 

ತುಮಕೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ,  ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎಂದು ಸರ್ಟಿಪಿ ಕೇಟ್ ನೀಡಲಾಗದು ಎಂದು ಸಚಿವ ರಾಜಣ್ಣ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ತಂದು ಕೂರಿಸಿದೆ. ಈ ಬಗ್ಗೆ ಪಕ್ಷದ ಮುಖಂಡರಲ್ಲಿಯೇ ಅಸಮಧಾನ ಭುಗಿಲೆದ್ದಿದೆ. ಇತ್ತೀಚಿನ ಬೈ ಎಲೆಕ್ಷನಗಳು ಯಾವ ಆಧಾರದ ಮೇಲೆ ಗೆಲುವು ಪಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.
ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆರೇ ತಿಂಗಳಿಗೆ ಮತ್ತೆ ಸೋಲಾಯಿತು. ಬಳ್ಳಾರಿ ಲೋಕಸಭಾ ಬೈ ಎಲೆಕ್ಷನ್ 2 ಲಕ್ಷ ಮತಗಳಿಂದ ಗೆದ್ದರೂ, ಸಾವತ್ರಿಕ ಚುನಾವಣೆಯಲ್ಲಿ ಸೋತೆವು. ಬೈ ಎಲೆಕ್ಷನ್‌ನ್ನೇ ಗೆಲುವೇ ಮಾನದಂಡ ಅಷ್ಟು ಸರಿಯಲ್ಲ ಎಂದರು.

Leave a Reply

Your email address will not be published. Required fields are marked *