Wednesday, 14th May 2025

ನಾನು ಭಾರತದ ಪ್ರಜೆಯಾಗಿದ್ದರೆ, ಬಿಹಾರ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದೆ: ಮೇರಿ ಮಿಲ್ಬೆನ್

ನವದೆಹಲಿ: ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸಲು ಧೈರ್ಯಶಾಲಿ ಮಹಿಳೆ ಮುಂದೆ ಬರಬೇಕು ಎಂದಿರುವ ಮಿಲ್ಬೆನ್, ನಾನು ಭಾರತದ ಪ್ರಜೆಯಾಗಿದ್ದರೆ, ಬಿಹಾರಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದೆ ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಹೇಳಿದ್ದಾರೆ.

ಮಹಿಳೆಯರ ಕುರಿತಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿಲುವನ್ನು ಶ್ಲಾಘಿಸಿರುವ ಅವರು, ಭಾರತ ಮತ್ತು ಭಾರತೀಯ ನಾಗರಿಕರ ಪ್ರಗತಿಗೆ ಅವರು ಅತ್ಯುತ್ತಮ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಕುರಿತಾಗಿ ವಿಧಾನಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ್ದಾರೆ.

ಭಾರತವು ನಿರ್ಣಾಯಕ ಕ್ಷಣವನ್ನು ಎದುರಿಸುತ್ತಿದೆ. ಅದರಲ್ಲೂ ಬಿಹಾರದಲ್ಲಿ ಮಹಿಳೆಯರ ಹಕ್ಕಿನ ಸಮಸ್ಯೆ ಇದೆ. ಅಲ್ಲಿ ಮಹಿಳೆಯರ ಮೌಲ್ಯಕ್ಕೆ ಸವಾಲು ಹಾಕಲಾಗುತ್ತಿದೆ. ಇದಕ್ಕೆ ಒಂದೇ ಉತ್ತರ. ಅದು ನಿತೀಶ್ ಕುಮಾರ್ ಅವರ ರಾಜೀನಾಮೆ ನೀಡಬೇಕು . ಬಿಹಾರವನ್ನು ಮುನ್ನಡೆಸಲು ಮಹಿಳೆಗೆ ಅಧಿಕಾರ ನೀಡುವಂತೆ ಭಾರತೀಯ ಜನತಾ ಪಕ್ಷಕ್ಕೆ ಮನವಿ ಮಾಡಿದರು.

ವಿಶ್ವದ ಜಾಗತಿಕ ಆರ್ಥಿಕ ಸ್ಥಿರತೆಗಾಗಿ ಪ್ರಧಾನಮಂತ್ರಿ ಮೋದಿ ಅವರು ಮಹಿಳೆಯರ ಪರವಾಗಿ ನಿಂತಿದ್ದಾರೆ ಇದಕ್ಕಾಗಿ ನಾನು ಅವರನ್ನು ಬೆಂಬಲಿಸು ತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *