ಅರ್ಜೆಂಟೀನಾ: ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಫುಟ್ಬಾಲ್ ಕ್ರೀಡೆಯ ಇತಿಹಾಸದಲ್ಲಿ ಅತಿ ಹೆಚ್ಚು ದಾಖಲೆಯ 8ನೇ ಬಾರಿಗೆ ಬ್ಯಾಲನ್ ಡಿ’ಓರ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಈ ಹಿಂದೆ 2009, 2010, 2011, 2012, 2015, 2019, 2021 ಮತ್ತು ಇದೀಗ 2023ರಲ್ಲಿ ಬ್ಯಾಲನ್ ಡಿ’ಓರ್ ಕಿರೀಟಕ್ಕೆ ಲಿಯೋನೆಲ್ ಮೆಸ್ಸಿ ಭಾಜನರಾಗಿದ್ದಾರೆ.
ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಾರೆ ಎರ್ಲಿಂಗ್ ಹಾಲೆಂಡ್ ಎರಡನೇ ಸ್ಥಾನ ಪಡೆದರು ಮತ್ತು ಲಿಯೋನೆಲ್ ಮೆಸ್ಸಿಯ ಮಾಜಿ PSG ತಂಡದ ಸಹ ಆಟಗಾರ ಕೈಲಿಯನ್ ಎಂಬಪ್ಪೆ ಮೂರನೇ ಸ್ಥಾನ ಪಡೆದರು.
ಫುಟ್ಬಾಲ್ ವಿಶ್ವಕಪ್ ಗೆಲುವಿಗೆ ಸ್ಪೇನ್ ತಂಡಕ್ಕೆ ಮಾರ್ಗದರ್ಶನ ನೀಡಿದ ಐತಾನಾ ಬೊನ್ಮತಿ ಮಹಿಳಾ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಐತಾನಾ ಬೊನ್ಮತಿ 2023ರ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಸಹ ಗೆದ್ದಿದ್ದರು. ಅವರು ಕಳೆದ ಋತುವಿನಲ್ಲಿ ಬಾರ್ಸಿಲೋನಾ ತಂಡದೊಂದಿಗೆ ಮಹಿಳಾ ಚಾಂಪಿಯನ್ಸ್ ಲೀಗ್‌ನ ಲಾ ಲಿಗಾ ಪ್ರಶಸ್ತಿಯನ್ನು ಗೆದ್ದರು. ಅಲ್ಲದೆ, 2022-23ರ ಋತುವಿನ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಬ್ಯಾಲನ್ ಡಿ’ಓರ್ 2023 ಪ್ರಶಸ್ತಿ ವಿಜೇತರ ಪಟ್ಟಿ
1) ಪುರುಷರ ಬ್ಯಾಲನ್ ಡಿ’ಓರ್ – ಲಿಯೋನೆಲ್ ಮೆಸ್ಸಿ
2) ಮಹಿಳಾ ಬ್ಯಾಲನ್ ಡಿ’ಓರ್ – ಐತಾನಾ ಬೊನ್ಮತಿ
3) ಗೆರ್ಡ್ ಮುಲ್ಲರ್ ಟ್ರೋಫಿ – ಎರ್ಲಿಂಗ್ ಹಾಲೆಂಡ್
4) ಯಾಚಿನ್ ಟ್ರೋಫಿ – ಎಮಿಲಿಯಾನೋ ಮಾರ್ಟಿನೆಜ್
5) ಸಾಕ್ರಟೀಸ್ ಪ್ರಶಸ್ತಿ – ವಿನಿಸಿಯಸ್ ಜೂನಿಯರ್
6) ಕೋಪ ಟ್ರೋಫಿ – ಜೂಡ್ ಬೆಲ್ಲಿಂಗ್‌ಹ್ಯಾಮ್
7) ವರ್ಷದ ಪುರುಷರ ಕ್ಲಬ್ – ಮ್ಯಾಂಚೆಸ್ಟರ್ ಸಿಟಿ
8) ವರ್ಷದ ಮಹಿಳಾ ಕ್ಲಬ್ – ಎಫ್‌ಸಿ ಬಾರ್ಸಿಲೋನಾ