Saturday, 17th May 2025

ಗರ್ಬಾ ಸಾಂಪ್ರದಾಯಿಕ ನೃತ್ಯ: ಹೃದಯಾಘಾತದಿಂದ 10 ಜನರ ಸಾವು

ಗುಜರಾತ್‌: ನವರಾತ್ರಿ ಆಚರಣೆ ಸಂಭ್ರಮದಿಂದ ಜರುಗುತ್ತಿದೆ. ಗುಜರಾತ್‌ನಲ್ಲಿಅದ್ದೂರಿಯಾದ ಆಚರಣೆ ನಡೆಯುತ್ತಿದ್ದು, ಗರ್ಬಾ ಸಾಂಪ್ರದಾಯಿಕ ನೃತ್ಯದ ವೇಳೆ ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ 10 ಜನ ಮೃತಪಟ್ಟಿದ್ದಾರೆ.

ಗುಜರಾತ್‌ನ ಬರೋಡಾ ಸೇರಿ ಹಲವೆಡೆ ಗರ್ಬಾ ಹಾಡು, ನೃತ್ಯದ ವೇಳೆ ಜೋರಾದ ಸಂಗೀತದ ಶಬ್ದದಿಂದಾಗಿ ಹೆಚ್ಚಿನ ಜನರಿಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಬರೋಡಾದ ದಭೋಯಿಯಲ್ಲಿ 13 ವರ್ಷದ ಬಾಲಕನು ಗರ್ಬಾ ನೃತ್ಯದ ವೇಳೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತಾದರೂ ಅಷ್ಟೊತ್ತಿಗಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಅಹ್ಮದಾಬಾದ್‌ನಲ್ಲೂ ಗರ್ಬಾ ಆಚರಣೆ ವೇಳೆ 24 ವರ್ಷದ ಯುವಕ ಕುಸಿದು ಮೃತಪಟ್ಟಿದ್ದಾನೆ. ಕಪಾಡ್ವಂಜ್‌ನಲ್ಲೂ ಹೃದಯಾಘಾತಕ್ಕೆ 17 ವರ್ಷದ ಬಾಲಕ ಬಲಿಯಾಗಿದ್ದಾನೆ. ಕಳೆದ 24 ಗಂಟೆಯಲ್ಲಿ ಗರ್ಬಾ ನೃತ್ಯ ಆಚರಣೆ ವೇಳೆ ಹೃದಯಾಘಾತದಿಂದ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಎಲ್ಲರೂ ಗರ್ಬಾ ನೃತ್ಯ ನಡೆಯುವ ವೇಳೆ ಅಂದರೆ ಸಂಜೆ 6 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೆ ಕರೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *