ಚೆನ್ನೈ: ಕಾಲಿವುಡ್ ಸಿನಿಮಾರಂಗದ ಕಲಾ ನಿರ್ದೇಶಕ ಮಿಲನ್ (54) ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶೂಟಿಂಗ್ ಮುಗಿಸಿ ಹೊಟೇಲ್ ನಿಂದ ಮರಳಿದ್ದ ಮಿಲನ್ ಅವರು ಭಾನುವಾರ ಕೆಲಸಕ್ಕಾಗಿ ತನ್ನ ತಂಡದ ವರನ್ನು ಒಟ್ಟುಗೂಡಿಸಿದ್ದರು.
ಆದರೆ ಬಳಿಕ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅತಿಯಾಗಿ ಬೆವರಲು ಆರಂಭಿಸಿ ಈ ಬಗ್ಗೆ ಅವರ ತಂಡಕ್ಕೆ ಹೇಳಿದ್ದರು. ಕೂಡಲೇ ಪ್ರೊಡಕ್ಷನ್ ತಂಡವರು ಕಾರಿನ ವ್ಯವಸ್ಥೆಯನ್ನು ಮಾಡಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ವಿಚಾರ ಕೇಳಿ ನಟ ಅಜಿತ್ , ನಿರ್ದೇಶಕ ಮಾಗಿಜ್ ತಿರುಮೇನಿ ಮತ್ತು ಛಾಯಾಗ್ರಾಹಕ ನೀರವ್ ಶಾ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಮಿಲನ್ ಆದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಿಲನ್ ನಟ ಅಜಿತ್ ಅವರ ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು.
ಮಿಲನ್ ಅಜಿತ್ ಅವರ ‘ಬಿಲ್ಲಾ’, ‘ವೇಲಾಯುಧಂ’, ‘ವೀರಂ’ ಮುಂತಾದ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಮೃತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.