Tuesday, 13th May 2025

ಭಾರತ – ಅಫಘಾನಿಸ್ತಾನ ಪಂದ್ಯದಲ್ಲಿ ಗ್ಯಾಲರಿಯಲ್ಲಿ ಹೊಡೆದಾಟ

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಜಗಳ ವಿಶ್ವಕಪ್ ಟೂರ್ನಿಯಲ್ಲಿ ಅಂತ್ಯವಾಗಿರು ವಂತೆಯೇ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಮಾತ್ರ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಅಫಘಾನಿಸ್ತಾನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿ ಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿದೆ.

ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಕ್ರಿಕೆಟ್ ಅಭಿಮಾನಿಗಳು (Indian Cricket Fans) ಮಾತ್ರ ಹೊಡೆದಾಡಿಕೊಂಡಿದ್ದಾರೆ. ಭಾರತ-ಅಫಘಾನಿಸ್ತಾನ ಪಂದ್ಯದ ವೇಳೆ ಭಾರತದ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಯೇ ಜಗಳ ನಡೆದಿದೆ. ಕೆಲವರು ಭಾರತ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟಿದ್ದು, ಇನ್ನೂ ಕೆಲವರು ಸಾಮಾನ್ಯ ಉಡುಪಿನಲ್ಲಿದ್ದಾರೆ. ಎರಡು ಗುಂಪುಗಳ ಮಧ್ಯೆ ಮೊದಲು ವಾಗ್ವಾದ ಆರಂಭವಾಗಿದೆ.

ಇದಾದ ಬಳಿಕ ಕೈ ಕೈ ಮಿಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಜಗಳ ತಾರಕಕ್ಕೇರಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಟೀಕೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *