Tuesday, 13th May 2025

ಐಪಿಎಲ್ ನಲ್ಲಿ 4500 ರನ್: ಮಿ.360 ಹೊಸ ದಾಖಲೆ

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಎಬಿ ಡಿವಿಲಿಯರ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ನಲ್ಲಿ 4500 ರನ್ ಗಡಿ ದಾಟಿದ ಎರಡನೇ ವಿದೇಶಿ ಆಟಗಾರನಾಗಿ ಹೊರಹೊಮ್ಮಿ ದ್ದಾರೆ.

ಐಪಿಎಲ್’ನಲ್ಲಿ 4500 ರನ್ ಬಾರಿಸಿದ ಆರನೇ ಆಟಗಾರ, ಎರಡನೇ ವಿದೇಶಿ ಆಟಗಾರನಾಗಿ ಎಬಿಡಿ ಮೂಡಿಬಂದರು. ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸುರೇಶ್ ರೈನಾ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಇದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಸೂಪರ್ ಓವರ್ ಕದನದಲ್ಲಿ ಗೆದ್ದ ಬೆಂಗಳೂರು ಕೂಟದ ಎರಡನೇ ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳನ್ನು ಎದುರಿಸಿದ ಎಬಿಡಿ ಅಜೇಯ 55 ರನ್ ಬಾರಿಸಿದ್ದರು. ನಾಲ್ಕು ಸಿಕ್ಸರ್ ನಾಲ್ಕು ಬೌಂಡರಿ ಬಾರಿಸಿದ ಎಬಿಡಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಸಹಾಯಕವಾಗಿದ್ದರು.

 

Leave a Reply

Your email address will not be published. Required fields are marked *