Wednesday, 14th May 2025

ಕಡಲತೀರದಲ್ಲಿ ಕಾಣಿಸಿಕೊಂಡಿರುವ ನಿಗೂಢ ವಸ್ತು ಪಿಎಸ್‌ಎಲ್‌ವಿ ಅವಶೇಷ: ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ

ಚೆನ್ನೈ: ಕಡಲತೀರದಲ್ಲಿ ಕಾಣಿಸಿಕೊಂಡಿರುವ ನಿಗೂಢ ವಸ್ತುವು ಭಾರತೀಯ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ನ ಅವಶೇಷವಾಗಿದೆ ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಸೋಮವಾರ ಹೇಳಿದೆ.

“ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮೀಪವಿರುವ ಕಡಲತೀರದಲ್ಲಿ ಬಿದ್ದಿರುವ ವಸ್ತುವು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ನ ಕಳಚಿಕೊಂಡ ಮೂರನೇ ಹಂತದ ಅವಶೇಷವಾಗಿದೆ ಎಂದು ನಾವು ತೀರ್ಮಾನಿಸಿದ್ದೇವೆ. ಪಿಎಸ್‌ಎಲ್‌ವಿ ಇದು ಮಧ್ಯಮ ಕಕ್ಷೆಗೆ ಉಪಗ್ರಹವನ್ನು ಸೇರಿಸುವ ಉಡಾವಣಾ ವಾಹನವಾಗಿದ್ದು, ಇಸ್ರೊ ನಿರ್ವಹಿಸುತ್ತದೆ” ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಟ್ವೀಟ್ ಮಾಡಿದೆ.

ತನ್ನ ಸಮುದ್ರ ತೀರದಲ್ಲಿ ಕಾಣಿಸಿದ ಬೃಹತ್ ವಸ್ತುವು ಭಾರತೀಯ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)ನ ಅವಶೇಷವಾಗಿದೆ ಎಂದ ನಿರ್ಧಾರಕ್ಕೆ ಬರಲು ಸಾಕ್ಷಿಗಳೇನು ಎಂಬುದನ್ನು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಹೇಳಿಲ್ಲ.

“ಸಮುದ್ರ ತೀರದಲ್ಲಿ ಸಿಕ್ಕ ಅವಶೇಷವನ್ನು ಸಂಗ್ರಹಾಗಾ ರದಲ್ಲಿ ಇಡಲಾಗಿದೆ ಮತ್ತು ಆಸ್ಟ್ರೇಲಿಯನ್ ಬಾಹ್ಯಾ ಕಾಶ ಸಂಸ್ಥೆಯು ಇಸ್ರೊನೊಂದಿಗೆ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಈ ಬಗ್ಗೆ ಮಾತುಕತೆ ನಡೆಸುತ್ತಿದೆ. ವಿಶ್ವಸಂಸ್ಥೆಯ ಬಾಹ್ಯಾಕಾಶ ಒಪ್ಪಂದ ಗಳ ಅಡಿಯಲ್ಲಿ ಬಾಧ್ಯತೆಗಳನ್ನು ಪರಿಗಣಿಸುವುದು ಸೇರಿದಂತೆ ಮುಂದಿನ ಹಂತಗಳನ್ನು ನಿರ್ಧರಿಸಲಾಗು ವುದು” ಎಂದು ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ವಸ್ತುವು ತನ್ನ ಪಿಎಸ್‌ಎಲ್‌ವಿ ರಾಕೆಟ್‌ನ ಭಾಗ ಹೌದು ಅಥವಾ ಅಲ್ಲ ಎಂಬುದನ್ನು ಖಚಿತಪಡಿಸಲು ಸಾಧ್ಯ ವಿಲ್ಲ ಎಂದು ಈ ಮುನ್ನ ಇಸ್ರೋ ಹೇಳಿದೆ.

“ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಸಿಕ್ಕ ವಸ್ತುವನ್ನು ನಾವು ಖುದ್ದಾಗಿ ನೋಡದೆ ಮತ್ತು ಪರಿಶೀಲಿಸದೆ ಅದರ ಬಗ್ಗೆ ಏನನ್ನೂ ಖಚಿತಪಡಿಸಲು ಅಥವಾ ನಿರಾ ಕರಿಸಲು ಸಾಧ್ಯವಿಲ್ಲ. ಮೊದಲು ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ವಸ್ತುವಿನ ವೀಡಿಯೊವನ್ನು ಕಳುಹಿಸಬೇಕು. ಅದರ ಮೇಲೆ ಯಾವುದಾದರೂ ಗುರುತು ಗಳಿದ್ದರೆ ನೋಡಬೇಕು. ಅವರು ವಸ್ತುವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಗತ್ಯವಿದ್ದರೆ ಇಸ್ರೋ ಅಧಿಕಾರಿಗಳು ಅಲ್ಲಿಗೆ ಹೋಗಬಹುದು” ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ದಡದಲ್ಲಿ ಕಾಣಿಸಿಕೊಂಡ ಬೃಹತ್ ಲೋಹದ ವಸ್ತುವು, ಬಹಳ ಹಿಂದೆಯೇ ಹಾರಿ ಬಿಡಲಾದ ಭಾರತದ ಪಿಎಸ್‌ಎಲ್‌ವಿ ರಾಕೆಟ್‌ನ ಭಾಗವಾ ಗಿದೆಯೇ ಎಂಬ ಬಗ್ಗೆ ಊಹಾಪೋಹಗಳು ಬಾಹ್ಯಾಕಾಶ ಕ್ಷೇತ್ರದ ಅಧಿಕಾರಿಗಳಲ್ಲಿ ಕಾಣಿಸಿಕೊಂಡಿವೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಯು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಂಪರ್ಕಿಸಿದೆ ಎಂದು ಇಸ್ರೊ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *