Wednesday, 14th May 2025

ಅಂತಾರಾಷ್ಟ್ರೀಯ ಪ್ರದರ್ಶನ-ಕಮ್-ಕನ್ವೆನ್ಷನ್ ಸೆಂಟರ್ ಸಂಕೀರ್ಣ ಇಂದು ರಾಷ್ಟ್ರಕ್ಕೆ ಸಮರ್ಪಣೆ

ವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ-ಕಮ್-ಕನ್ವೆನ್ಷನ್ ಸೆಂಟರ್ ಸಂಕೀರ್ಣ ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಇದು ವಿಶ್ವದ ಪ್ರಮುಖ ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿ (PMO) ಹೇಳಿಕೊಂಡಿದೆ. ಸೆಪ್ಟೆಂಬರ್‌ನಲ್ಲಿ ಈ ಸಂಕೀರ್ಣ ದಲ್ಲಿ ಜಿ-20 ನಾಯಕರ ಸಭೆಯನ್ನು ಪ್ರಸ್ತಾಪಿಸಲಾಗಿದೆ.

ಸುಮಾರು 2,700 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಪಿಎಂಒ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸರಿಸುಮಾರು 123 ಎಕರೆಗಳ ಕ್ಯಾಂಪಸ್ ಪ್ರದೇಶದೊಂದಿಗೆ, IECC ಕ್ಯಾಂಪಸ್ ಅನ್ನು ಭಾರತದ ಅತಿದೊಡ್ಡ MICE (ಸಭೆಗಳು, ಪ್ರೋತ್ಸಾಹಕಗಳು, ಸಮಾ ವೇಶಗಳು ಮತ್ತು ಪ್ರದರ್ಶನಗಳು) ತಾಣ ವಾಗಿ ಅಭಿವೃದ್ಧಿಪಡಿಸಲಾಗಿದೆ.

ಪ್ರಗತಿ ಮೈದಾನದ ಪುನರಾಭಿವೃದ್ಧಿಗಾಗಿ ಭಾರತ ವ್ಯಾಪಾರ ಉತ್ತೇಜನ ಸಂಸ್ಥೆ (ITPO) ಪ್ರಸ್ತಾವನೆ ಯನ್ನು ಅನುಮೋದಿಸಿ, ದೆಹಲಿಯಲ್ಲಿ ವಿಶ್ವ ದರ್ಜೆಯ IECC ಅನ್ನು ಸ್ಥಾಪಿಸಲು ಸರ್ಕಾರವು ಜನವರಿ 2017 ರಲ್ಲಿ ಒಪ್ಪಿಕೊಂಡಿತು.

ದೇಶದಲ್ಲಿ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ವಿಶ್ವದರ್ಜೆಯ ಮೂಲಸೌಕರ್ಯವನ್ನು ಸೃಷ್ಟಿ ಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಪ್ರಗತಿ ಮೈದಾನದಲ್ಲಿ ಐಇಸಿಸಿ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ ಎಂದು ಪಿಎಂಒ ಹೇಳಿದೆ.

Leave a Reply

Your email address will not be published. Required fields are marked *