Tuesday, 13th May 2025

ಪಂಜಾಬಿ ಗಾಯಕ ಸುರೀಂದರ್ ಶಿಂದಾ ನಿಧನ

ಲೂಧಿಯಾನ: ಜನಪ್ರಿಯ ಪಂಜಾಬಿ ಗಾಯಕ ಸುರೀಂದರ್ ಶಿಂದಾ (Surinder Shinda)(60) ದೀರ್ಘಕಾಲದ ಅನಾರೋಗ್ಯ ದಿಂದ ಲುಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು.

ಅವರ ಗಾಯನ ವೃತ್ತಿಜೀವನದ ಅವಧಿಯಲ್ಲಿ, ಅವರು ಅನೇಕ ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ ಮತ್ತು ಪಟ್ ಜತ್ತನ್ ದೇ, ಉಚಾ ದರ್ ಬಾಬೆ ನಾನಕ್ ದಾ ಮತ್ತು ಬದ್ಲಾ ಜಟ್ಟಿ ದಾ ಮುಂತಾದ ಹಲವಾರು ಪಂಜಾಬಿ ಚಲನಚಿತ್ರಗಳಲ್ಲಿ ಕಾಣಿಸಿ ಕೊಂಡರು.

ಶಿಂದಾ ಅವರ ನಿಧನಕ್ಕೆ ಗಾಯಕರು, ರಾಜಕಾರಣಿಗಳು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿ, “ಖ್ಯಾತ ಗಾಯಕ ಸುರಿಂದರ್ ಶಿಂದಾ ಜಿ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಪಂಜಾಬ್ ಧ್ವನಿ ಶಾಶ್ವತವಾಗಿ ಮೌನವಾಗಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *