*ಬುಮ್ರಾ ಬೌಲಿಂಗ್‌ನಲ್ಲಿ ಪಂದ್ಯವೊAದರಲ್ಲಿ ಪ್ಯಾಟ್ ಕಮ್ಮಿನ್ಸ್ ನಾಲ್ಕು ಸಿಕ್ಸರ್ ಬಾರಿಸಿದರು.
*ಅತೀ ಹೆಚ್ಚು ಪಂದ್ಯ ಗೆದ್ದವರು – ಕೆಕೆಆರ್ ವಿರುದ್ದ ಮುಂಬೈ ಇಂಡಿಯನ್ಸ್ (20)
*2013 ರಿಂದಲೂ ತನ್ನ ಮೊದಲ ಪಂದ್ಯ ಗೆಲ್ಲುತ್ತಿದ್ದ ಕೆಕೆಆರ್ ಈ ಬಾರಿ ಸೋತಿತು
ಅಬುಧಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಐದನೇ ಪಂದ್ಯದಲ್ಲಿ ಮುಂಬೈ ತಂಡ ತನ್ನ ಮೊದಲನೇ ಗೆಲುವಿನ ರುಚಿಯನ್ನು ಸವಿಯಿತು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕದ ಉಡುಗೊರೆ ನೀಡಿದರು. ಅವರಿಗೆ ವನ್‌ಡೌನ್ ಆಟಗಾರ ಸೂರ್ಯಕುಮಾರ್ ಯಾದವ್ (47) ಉತ್ತಮ ಬೆಂಬಲ ಒದಗಿಸಿದರು. ರೋಹಿತ್ ಇನ್ನಿಂಗ್ಸಿನಲ್ಲಿ ಆರು ಸಿಕ್ಸರ್ ಹಾಗೂ ಮೂರು ಬೌಂಡರಿ ಬಂದವು. ಅಂತಿಮ ಓವರುಗಳಲ್ಲಿ ಲಗುಬಗನೆ ವಿಕೆಟ್ ಉರುಳಿದ ಕಾರಣ, ತಂಡದ ಮೊತ್ತ ನಿಗದಿತ ಓವರುಗಳಲ್ಲಿ 195 ರನ್ ಗಳಿಸಿತು.
ಜವಾಬು ನೀಡಲಾರಂಭಿಸಿದ ಕೋಲ್ಕತಾ ನೈಟ್ ರೈಡರ‍್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾ ಸುನೀಲ್ ನಾರಾಯಣ್ ಹಾಗೂ ಶುಭ್ಮನ್ ಗಿಲ್ ಎಂದಿನ ಸ್ಪೋಟಕ ಆಟವಾಡದಿರುವುದು ತಂಡದ ರನ್ ಚೇಸಿಂಗಿಗೆ ಆರಂಭದಲ್ಲೇ ದೊಡ್ಡ ಹೊಡೆತ ಬಿತ್ತು. ನಾಯಕ ದಿನೇಶ್ ಕಾರ್ತಿಕ್ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬಂದರೂ 30 ರನ್ನಿಗೆ ಸಾಕೆನಿಸಿ ಕೊಂಡರು. ಯಾವ ಆಟಗಾರನಿಂದಲೂ ದೀರ್ಘ ಇನ್ನಿಂಗ್ಸ್ ಹೊರಹೊಮ್ಮಲಿಲ್ಲ. ಕೊನೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಸ್ವಲ್ಪ ಸಮಯ ಸ್ಪೋಟಕ ಆಟ ಪ್ರದರ್ಶಿಸಿದರು.
ಮುಂಬೈನ ಸ್ಪೆಷಲಿಸ್ಟ್ ಬೌಲರ್ ಜಸ್‌ಪ್ರೀತ್ ಬುಮ್ರಾ, ಇತರ ವೇಗಗಳಾದ ಪ್ಯಾಟಿನ್ಸನ್, ಚಹರ್ ಹಾಗೂ ಬೌಲ್ಟ್ ತಲಾ ಎರಡು ವಿಕೆಟ್ ಕಬಳಿಸಿದರು. ಪ್ರತಿ ಬೌಲರುಗಳು ಸಂಘಟಿತ ಬೌಲಿಂಗ್ ನಡೆಸಿ, ಕೋಲ್ಕತಾ ತಂಡದ ರನ್ ವೇಗಕ್ಕೆ ಸಂಪೂರ್ಣ ಕಡಿವಾಣ ಹಾಕಿದರು. ಅಂತಿಮವಾಗಿ ಕೋಲ್ಕತಾ ಒಂಬತ್ತು ವಿಕೆಟ್ ಕಳೆದುಕೊಂಡು ೧೪೬ ರನ್ ಗಳಿಸಿ, ಸೋಲೊಪ್ಪಿಕೊಂಡಿತು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 195/5
ರೋಹಿತ್ ಶರ್ಮಾ 80, ಸೂರ್ಯಕುಮಾರ್ ಯಾದವ್ 47
ಬೌಲಿಂಗ್: ಶಿವಂ ಮವಿ 32/2
ಕೋಲ್ಕತಾ ನೈಟ್ ರೈಡರ‍್ಸ್
ದಿನೇಶ್ ಕಾರ್ತಿಕ್ 30, ನಿತಿಶ್ ರಾಣಾ 24, ಪ್ಯಾಟ್ ಕಮ್ಮಿನ್ಸ್ 33
ಬೌಲಿಂಗ್: ಟ್ರೆಂಟ್ ಬೌಲ್ಟ್ 30/2, ಜೇಮ್ಸ್ ಪ್ಯಾಟಿನ್‌ಸನ್ 25/2, ಬುಮ್ರಾ 32/2, ರಾಹುಲ್ ಚಹರ್ 26/2.