Thursday, 15th May 2025

75 ರೂ.ಗಳ ವಿಶೇಷ ನಾಣ್ಯ ಬಿಡುಗಡೆ

ವದೆಹಲಿ: ಹೊಸ ಸಂಸತ್ ಭವನದ ಎರಡನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಹಣಕಾಸು ಸಚಿವಾಲಯವು ತಯಾರಿಸಿದ 75 ರೂ.ಗಳ ವಿಶೇಷ ನಾಣ್ಯವನ್ನು ಸಂಸತ್ ಭವನದಿಂದ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸ್ಮರಣಾರ್ಥ ಅಂಚೆ ಚೀಟಿ ಯನ್ನು ಬಿಡುಗಡೆ ಮಾಡಿದರು.

ಹೊಸ ಕಟ್ಟಡದ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ಅಂತಹ ಒಂದು ಶುಭ ಸಂದರ್ಭವಾಗಿದೆ ಎಂದರು. ದೇಶವು ಅಮೃತ ಮಹೋತ್ಸವವಾಗಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸು ತ್ತಿದೆ ಎಂದು ತಿಳಿಸಿದರು.

ಬೆಳಿಗ್ಗೆ ಸಂಸತ್ ಭವನದ ಸಂಕೀರ್ಣದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು ಎಂದು ಪ್ರಧಾನಿ ಹೇಳಿದರು.

ಈ ಸುವರ್ಣ ಕ್ಷಣಕ್ಕಾಗಿ ನಾನು ಎಲ್ಲ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಇದು ಕೇವಲ ಕಟ್ಟಡವಲ್ಲ, ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ದೇವಾಲಯ ಎಂದರು.