Wednesday, 14th May 2025

ಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ

ವದೆಹಲಿ: ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಭಾನುವಾರ 5.9 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ, ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ನಡುಕ ಉಂಟಾಗಿದೆ.

ಈಗಾಗಲೇ ಹಲವು ಭಾರಿ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಭೂ ಕಂಪನದ ಅನುಭವ ಉಂಟಾಗಿತ್ತು. ಅಫ್ಘಾನಿಸ್ಥಾನದಲ್ಲಿ ಉಂಟಾದಂತ ಪ್ರಭಲ 5.9 ತೀವ್ರತೆಯ ಭೂಕಂಪನದಿಂದ ಜನರು ಬೆಚ್ಚಿ ಬೀಳುವಂತೆ ಆಗಿದೆ.

ಭೂಮಿ ಕಂಪಿಸಿದ್ದರಿಂದಾಗಿ ಕೆಲ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಭಯದಲ್ಲಿ ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ತಾನದ ಫೈಜಾಬಾದ್ನ ಆಗ್ನೇಯಕ್ಕೆ 70 ಕಿ.ಮೀ ದೂರದಲ್ಲಿ ಬೆಳಿಗ್ಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ.