Tuesday, 13th May 2025

ಮುಂಬೈಗೆ ಮೊದಲ ಗೆಲುವಿನ ತವಕ

ಅಬುಧಾಬಿ: ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಎದುರು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಕೋಲ್ಕತಾ ನೈಟ್‍ ರೈಡರ್ಸ್ ತಂಡವನ್ನು ಲಘುವಾಗಿ ಪರಿಗಣಿಸದು.

ಕೋಲ್ಕತಾ ತಂಡದಲ್ಲಿ ಆಲ್ರೌಂಡರುಗಳ ಪಡೆಯೇ ಇದೆ. ಸುನೀಲ್ ನಾರಾಯಣ್‍, ಆಂದ್ರೆ ರಸೆಲ್ ಮುಂತಾದವರು ಯಾವುದೇ ಹಂತದಲ್ಲಿ ಕ್ರೀಸಿಗೆ ಇಳಿದು ರನ್ ಹರಿಸಬಲ್ಲರು. ಈ ಪೈಕಿ ಸುನೀಲ್ ನಾರಾಯಣ್‍ಗೆ ಆರಂಭಿಕ ಸ್ಥಾನ ಗಟ್ಟಿ. ಶುಭಮನ್ ಗಿಲ್‍ ಜತೆ ತಂಡಕ್ಕೆ ಉತ್ತಮ ಆರಂಭ ನೀಡಬಲ್ಲರು. ಹೀಗಾಗಿ ಮೊದಲ ಪಂದ್ಯದಲ್ಲೇ ಜಯಭೇರಿ ಬಾರಿಸಲು ಯೋಜನೆ ರೂಪಿಸುತ್ತಿದೆ.
ಒಂದು ಪಂದ್ಯದಲ್ಲಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ಗೆ ಇಲ್ಲಿ ಗೆಲುವು ಅನಿವಾರ್ಯ. ನಾಯಕ ರೋಹಿತ್ ಶರ್ಮಾ ಸಿಡಿಯಬೇಕಿದೆ. ಆಲ್ರೌಂಡರ್ ಪಾಂಡ್ಯ ಸಹೋದರರು, ಕೀರನ್‍ ಪೋಲಾರ್ಡ್ ಸ್ಪೋಟಕ ಆಟವಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ.
ಸೌರಭ್‍ ತಿವಾರಿ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು,  ಇಲ್ಲೂ ಅದೇ ಪ್ರದರ್ಶನ ಮುಂದುವರಿಸಬೇಕಿದೆ.

ಸಂಭಾವ್ಯ ತಂಡ ಇಂತಿದೆ.
ಕೋಲ್ಕತಾ ನೈಟ್ ರೈಡರ್ಸ್
ಸುನೀಲ್‍ ನರೀನ್, ಶುಬ್ಮನ್‍ ಗಿಲ್‍, ನಿತೀಶ್‍ ರಾಣಾ, ಇಯಾನ್ ಮಾರ್ಗನ್, ಆಂಡ್ರೆ ರಸೆಲ್‍, ದಿನೇಶ್‍ ಕಾರ್ತಿಕ್ (ನಾ/ಕೀ), ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ/ ಸಂದೀಪ್ ವಾರಿಯರ್, ಶಿವಂ ಮವಿ, ಪ್ರಸಿದ್ದ್ ಕೃಷ್ಣಾ.

ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ನಾ), ಕ್ವಿಂಟನ್‍ ಡಿ’ಕಾಕ್‍, ಸೂರ್ಯಕುಮಾರ್ ಯಾದವ್, ಸೌರಭ್‍ ತಿವಾರಿ/ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೋಲಾರ್ಡ್, ಕೃಣಾಲ್ ಪಾಂಡ್ಯ, ನಥನ್‍‍ ಕೌಲ್ಟರ್ ನೈಲ್/ಜೇಮ್ಸ್ ಪ್ಯಾಟಿನ್ ಸನ್‍, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‍ಪ್ರೀತ್ ಬೂಮ್ರಾ.

ಪಂದ್ಯದ ಆರಂಭ: 7.30 (ಭಾರತೀಯ ಕಾಲಮಾನ)

ಸ್ಥಳ: ಶೇಖ್ ಜಾಯೆದ್ ಸ್ಟೇಡಿಯಂ, ಅಬುಧಾಭಿ

Leave a Reply

Your email address will not be published. Required fields are marked *