Tuesday, 13th May 2025

ಕ್ರೀಡಾಂಗಣದಲ್ಲಿ ಕಾಲ್ತುಳಿತ: ಹನ್ನೆರಡು ಜನರ ಸಾವು

ಸ್ಯಾನ್ ಸಾಲ್ವಡಾರ್: ಸ್ಥಳೀಯ ಪಂದ್ಯಾವಳಿಯನ್ನು ವೀಕ್ಷಿಸಲು ಫುಟ್ಬಾಲ್ ಅಭಿಮಾನಿ ಗಳು ಜಮಾಯಿಸಿದ್ದ ಎಲ್ ಸಾಲ್ವಡಾರ್ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ ಹನ್ನೆರಡು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯ ಅಮೆರಿಕಾದ ರಾಜಧಾನಿ ಸ್ಯಾನ್ ಸಾಲ್ವಡಾರ್‌ನ ಕುಸ್ಕಾಟ್ಲಾನ್ ಕ್ರೀಡಾಂಗಣಕ್ಕೆ ಅಲಿಯಾಂಜಾ ಮತ್ತು ಎಫ್‌ಎಎಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಪ್ರವೇಶಿಸಲು ಪ್ರಯತ್ನಿಸಿದರು.

ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ಸಿಬ್ಬಂದಿಗಳು ಕಾಲ್ತುಳಿತದಲ್ಲಿ ಗಾಯಗೊಂಡಿರುವಂತವ ರನ್ನು ಸಮೀಪದ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸುವ ಕಾರ್ಯದಲ್ಲಿ ತೊಡಗಿ ದ್ದಾರೆ.

12 ಮಂದಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಒಂಭತ್ತು ಮಂದಿ ಸ್ಟೇಡಿಯಂನಲ್ಲಿಯೇ ಸಾವನ್ನಪ್ಪಿದ್ದರೇ, ಇತರೆ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವು ದಾಗಿ ತಿಳಿಸಿದ್ದಾರೆ.

500 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತುರ್ತು ಸೇವೆಗಳ ಗುಂಪು ಕೊಮಾಂಡೋಸ್ ಡಿ ಸಾಲ್ವಮೆಂಟೊ ವಕ್ತಾರ ಕಾರ್ಲೋಸ್ ಫ್ಯೂಂಟೆಸ್ ಹೇಳಿದ್ದಾರೆ.