Thursday, 15th May 2025

ಗುಜರಾತ್‌: ಸರೋವರದಲ್ಲಿ ಮುಳುಗಿ ಐವರು ಬಾಲಕರ ಸಾವು

ಬೊಟಾಡ್ (ಗುಜರಾತ್): ಒಬ್ಬರನ್ನೊಬ್ಬರು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಗುಜರಾತ್‌ ನ ಬೊಟಾಡ್ ಪಟ್ಟಣದ ಕೃಷ್ಣ ಸಾಗರ ಸರೋವರದಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿದ್ದಾರೆ.

ಇಬ್ಬರು ಬಾಲಕರು ಕೃಷ್ಣ ಸಾಗರ ಕೆರೆಯಲ್ಲಿ ಮಧ್ಯಾಹ್ನ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಮೂವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಇಬ್ಬರನ್ನು ರಕ್ಷಿಸಲು ನೀರಿಗೆ ಹಾರಿದರು. ಆದರೆ, ಅವರೆಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರು ಮಕ್ಕಳು ಮಧ್ಯಾಹ್ನ ಈಜುತ್ತಿದ್ದಾಗ ಮುಳುಗಲು ಪ್ರಾರಂಭಿಸಿದರು. ಸ್ಥಳದಲ್ಲಿದ್ದ ಇತರ ಮೂವರು ಅವರನ್ನು ರಕ್ಷಿಸಲು ನೀರಿಗೆ ಹಾರಿದರು ಆದರೆ ಅವರೂ ಮುಳುಗಿ ಸಾವನ್ನಪ್ಪಿದ್ದಾರೆʼ ಎಂದು ಬಟೋಡ್ ಎಸ್ಪಿ ಕಿಶೋರ್ ಬಲೋಲಿಯಾ ತಿಳಿಸಿದ್ದಾರೆ.

ಮೃತರೆಲ್ಲರೂ 16-17 ವಯಸ್ಸಿನ ಆಸುಪಾಸಿವರಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.