Thursday, 15th May 2025

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ಮೇ15 ರಂದು ವಿಚಾರಣೆ

ವದೆಹಲಿ: ಅದಾನಿ-ಹಿಂಡೆನ್‌ಬರ್ಗ್ ಪ್ರಕರಣವನ್ನ ಸುಪ್ರೀಂಕೋರ್ಟ್ ಮುಂದೂಡಿದ್ದು, 15 ಮೇ ರಂದು ವಿಚಾರಣೆ ನಡೆಸಲಿದೆ.

ಇದಕ್ಕೂ ಮುನ್ನ ಸೆಬಿ ನ್ಯಾಯಾಲಯದಿಂದ ಆರು ತಿಂಗಳ ಕಾಲಾವಕಾಶ ಕೋರಿತ್ತು. ಆದರೆ, ತನಿಖೆ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶ ನೀಡಬೇಕೆಂಬ ಬೇಡಿಕೆ ಸಮಂಜಸವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೆಬಿಗೆ ತಿಳಿಸಿದರು.

ಆಗಸ್ಟ್ 14 ರ ಸುಮಾರಿಗೆ ವಿಚಾರಣೆ ನಡೆಸುತ್ತೇವೆ ಮತ್ತು ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ಸೂಚಿಸಿ ದರು. ಸೋಮವಾರದ ವಿಚಾರಣೆ ವೇಳೆ ಸೆಬಿಯ ಅರ್ಜಿಯನ್ನ ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

ಸೆಬಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯದ ದೃಷ್ಟಿಯಿಂದ ಇನ್ನೂ ಆರು ತಿಂಗಳ ಕಾಲಾವಕಾಶದ ಅಗತ್ಯವಿದೆ ಎಂದು ನ್ಯಾಯಾ ಲಯಕ್ಕೆ ತಿಳಿಸಿದರು.