Wednesday, 14th May 2025

ಮಿಗ್-21 ಪೈಟರ್ ಜೆಟ್ ವಿಮಾನ ಪತನ

ಜೈಪುರ: ಭಾರತೀಯ ವಾಯುಸೇನೆಯ ಮತ್ತೊಂದು ಮಿಗ್-21 ಪೈಟರ್ ಜೆಟ್ ವಿಮಾನ ಪತನವಾಗಿದೆ. ಜೆಟ್ ವಿಮಾನ ಅಪಘಾತ ದಲ್ಲಿ ಮೂವರು ಮೃತಪಟ್ಟಿದ್ದಾರೆ.

ರಾಜಸ್ಥಾನದ ಹನುಮಘಡ ಸಮೀಪದ ದಬ್ಲಿ ಗ್ರಾಮದ ಮನೆಯೊಂದರ ಮೇಲೆ ವಿಮಾನ ಬಿದ್ದ ಪರಿಣಾಮ ಮನೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಮಾನ ಪತನದಲ್ಲಿ ಪೈಲಟ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.