10 ಮಂದಿ ಗಾಯಗೊಂಡಿದ್ದಾರೆ. ವಲಸಿಗರ ಆಶ್ರಯತಾಣದ ಹೊರಗೆ ಬಸ್ಗಾಗಿ ಕಾಯು ತ್ತಿದ್ದ ಜನರಿಗೆ ಕಾರು ಬಂದು ಡಿಕ್ಕಿ ಹೊಡೆದಿತ್ತು.
SUV ಕಾರು ರಸ್ತೆ ತಡೆಬೇಲಿ ಮೇಲೆ ಚಲಿಸಿ ಪಲ್ಟಿಯಾಗಿದೆ. ಬಳಿಕ 60 ಮೀಟರ್ ದೂರ ಚಲಿಸಿದೆ. ರಸ್ತೆ ತಡೆ ಮೇಲೆ ಕುಳಿತಿದ್ದ ಜನರಿಗೆ ಗುದ್ದಿದ್ದಲ್ಲದೆ, ಅಲ್ಲಿಂದ 9 ಮೀಟರ್ ಮುಂದೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೂ ಡಿಕ್ಕಿ ಹೊಡೆದಿದೆ. ಅಪಘಾತ ದಲ್ಲಿ ಹೆಚ್ಚಾಗಿ ವೆನೆಜುವೆಲಾದ ಪುರುಷರು ಪ್ರಾಣ ಕಳೆದುಕೊಂಡಿದ್ದಾರೆ.
ಆರೋಪಿ ಚಾಲಕ ಘಟನೆಯ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಪಘಾತ ಸಂಭವಿಸಿದ ಸಿಟಿ ಬಸ್ ನಿಲ್ದಾಣವು ಶೆಲ್ಟರ್ ರಸ್ತೆಯ ಎದುರೇ ಇದ್ದು ಬಸ್ ನಿಲ್ದಾಣದ ಯಾವುದೇ ಗುರುತು ಹಾಕಲಾಗಿಲ್ಲ. ನಿಲ್ದಾಣದಲ್ಲಿ ಕುಳಿತುಕೊಳ್ಳಲು ಬೆಂಚು ಕೂಡ ಹಾಕಿಲ್ಲ. ಹಾಗಾಗಿ ನಿಲ್ದಾಣ ದಲ್ಲಿದ್ದ ಜನರು ರಸ್ತೆಯ ತಡೆಗೋಡೆ ಮೇಲೆ ಕುಳಿತಿದ್ದರು.