Sunday, 11th May 2025

ಪಕ್ಷೇತರರ ಪ್ರಣಾಳಿಕೆ: ಅವಿವಾಹಿತ ಯುವಕರಿಗೆ ಮದುವೆ ವಿಚಾರ ಪ್ರಸ್ತಾಪ…!

ಬೆಳಗಾವಿ: ಜಿಲ್ಲೆಯ ಪಕ್ಷೇತರ ಅಭ್ಯರ್ಥಿಗಳ ಪ್ರಣಾಳಿಕೆ ರಿಲೀಸ್‌ ಮಾಡಿದ್ದ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದು, ಅವಿವಾಹಿತ ಯುವಕರಿಗೆ ಮದುವೆ ಮಾಡಿಸುವ ವಿಚಾರ ಪ್ರಸ್ತಾಪ ಮಾಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮತದಾರರ ಸೆಳೆಯೋದಕ್ಕೆ ಎಗ್ಗಿಲ್ಲದೇ ರಣತಂತ್ರ ರೂಪಿಸುತ್ತಿದ್ದು ,ಇದೀಗ ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ.

ಇಬ್ಬರೂ ಅಭ್ಯರ್ಥಿಗಳು ಎರಡೂ ಮತಕ್ಷೇತ್ರದ ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.