Thursday, 15th May 2025

ತಮಿಳು ನಟ, ನಿರ್ದೇಶಕ ಮನೋಬಾಲಾ ಇನ್ನಿಲ್ಲ

ನ್ನೈ: ತಮಿಳು ನಟ, ನಿರ್ದೇಶಕ ಮನೋಬಾಲಾ(69)  ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಮನೋಬಾಲಾ ಅವರನ್ನು ಕಳೆದ ಎರಡು ವಾರಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.

ಅವರ ಸಾವಿನ ಸುದ್ದಿಯನ್ನು ನಟ-ನಿರ್ದೇಶಕ ಜಿಎಂ ಕುಮಾರ್ ಟ್ವಿಟ್ಟರ್ ನಲ್ಲಿ ದೃಢ ಪಡಿಸಿದ್ದಾರೆ. ‘ಮನೋಬಾಲಾ ಸರ್ ನಿಧನರಾದರು’ ಎಂದು ಟ್ವೀಟ್ ಮಾಡಿದ್ದಾರೆ.

ವರದಿಗಳ ಪ್ರಕಾರ, ಮನೋಬಾಲಾ ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯು ಸಿರೆಳೆದರು ಎನ್ನಲಾಗಿದೆ.

ಮೃತರು ಪತ್ನಿ ಉಷಾ ಮತ್ತು ಪುತ್ರ ಹರೀಶ್ ಅವರನ್ನು ಅಗಲಿದ್ದಾರೆ. ತಮಿಳು ಉದ್ಯಮದ ಅನೇಕ ಜನರು ಮತ್ತು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿ ದ್ದಾರೆ.