Wednesday, 14th May 2025

ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ 3 ಸ್ಥಳಗಳಲ್ಲಿ ಶೋಧ

ಬೆಂಗಳೂರು: ರವೀಂದರ್ ಬೈಜು ಮತ್ತು ಅವರ ಕಂಪನಿ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶನಿವಾರ ಬೆಂಗಳೂರಿನ 3 ಸ್ಥಳಗಳಲ್ಲಿ ಶೋಧ ಮತ್ತು ಜಪ್ತಿ ಕ್ರಮ ಕೈಗೊಂಡಿದೆ.

ಕಂಪನಿಯು ಬೈಜುಸ್ ಹೆಸರಿನಲ್ಲಿ ಜನಪ್ರಿಯ ಆನ್ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. ಶೋಧ ಮತ್ತು ವಶಪಡಿಸಿ ಕೊಳ್ಳುವ ಕ್ರಮದ ಸಮಯದಲ್ಲಿ ವಿವಿಧ ದೋಷಾರೋಪಣೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳ ಲಾಗಿದೆ.

ಬೆಂಗಳೂರಿನ ಬೈಜು ಮಾಲೀಕ ರವಿಂದರ್ ಅವರ ಎರಡು ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದೆ. ಅಲ್ಲದೇ ಅವರ ನಿವಾಸದಲ್ಲಿಯೂ ಶೋಧವನ್ನು ಮುಂದುವರೆಸಿದೆ.