Tuesday, 13th May 2025

ಕ್ಲಬ್‌ಹೌಸ್’ನಿಂದಲೂ ಉದ್ಯೋಗ ಕಡಿತ ಘೋಷಣೆ

ನವದೆಹಲಿ: ಆಡಿಯೋ ಆಧಾರಿತ ಸಾಮಾಜಿಕ ಮಾಧ್ಯಮ ಆಪ್ ಕ್ಲಬ್‌ಹೌಸ್ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ.

ಕ್ಲಬ್‌ಹೌಸ್ ಶೇಕಡ 50ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಈ ಬಗ್ಗೆ ಉದ್ಯೋಗಿಗಳಿಗೆ ನೋಟಿಸ್ ಮೂಲಕ ಮಾಹಿತಿ ನೀಡಲಾಗಿದೆ.

ಕ್ಲಬ್‌ಹೌಸ್ ಸಹಸಂಸ್ಥಾಪಕರಾದ ಪೌಲ್ ಡೇವಿಸನ್ ಮತ್ತು ರೋಹನ್ ಸೇತ್ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ಮಾಡಿ ರಿಸೆಟ್ ಮಾಡಲು ಈ ನಿರ್ಧಾರವನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಸಣ್ಣ ಹಾಗೂ ಉತ್ಪಾದನೆ ಆಧಾರಿಯ ತಂಡದ ಮೇಲೆ ಗಮನಹರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಮ್ಮ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಪಿಂಕ್ ಸ್ಲಿಪ್ ನೀಡಿದ ಉದ್ಯೋಗಿಗಳಿಗೆ ಪರಿಹಾರ ಒದಗಿಸಿದಂತೆ ಕ್ಲಬ್‌ಹೌಸ್ ಕೂಡಾ ಪರಿಹಾರವನ್ನು ನೀಡಿದೆ. ಸಂಸ್ಥೆಯಿಂದ ಹೊರನಡೆಯುವ ಉದ್ಯೋಗಿಗೆ ವೇತನ, ಈಕ್ವಿಟಿ ಲಭ್ಯತೆ, ಆರೋಗ್ಯ ರಕ್ಷಣೆ, ಮತ್ತು ವೃತ್ತಿ ಮತ್ತು ವಲಸೆ ಬೆಂಬಲವನ್ನು ಒದಗಿಸುತ್ತಿದೆ. ಇನ್ನು ಸಂಸ್ಥೆಯು ನೀಡಿರುವ ಲ್ಯಾಪ್‌ಟಾಪ್ ಅನ್ನು ಉದ್ಯೋಗಿಗಳು ಹಿಂದಕ್ಕೆ ನೀಡಬೇಕಾಗಿಲ್ಲ. ಹೊಸ ಉದ್ಯೋಗಕ್ಕೆ ಸಹಾಯವಾಗುವಂತೆ ತಮ್ಮ ಬಳಿಯೇ ಇಟ್ಟುಕೊಳ್ಳಬಹುದಾಗಿದೆ.

ಸಂಸ್ಥೆಯು ಉದ್ಯೋಗ ಕಳೆದುಕೊಂಡವರಿಗೆ ಏಪ್ರಿಲ್ ತಿಂಗಳ ಸಂಪೂರ್ಣ ಅವಧಿಯ ವೇತನವನ್ನು ಉದ್ಯೋಗಿಗಳಿಗೆ ನೀಡಲಿದೆ.

ಈ ಹಿಂದೆ ವಿಟ್ಟರ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಭಾರತದ ಕೂ ಸಂಸ್ಥೆಯು ಕೂಡಾ ಈಗ ಉದ್ಯೋಗ ಕಡಿತ ವನ್ನು ಘೋಷಣೆ ಮಾಡಿದೆ. ಒಂದು ವರ್ಷದ ಅವಧಿಯಲ್ಲಿ ಶೇಕಡ 30ರಷ್ಟು ಅಥವಾ 260 ಉದ್ಯೋಗಿಗಳನ್ನು ವಜಾಗೊಳಿಸ ಲಾಗಿದೆ ಎಂಬ ಮಾಹಿತಿಯನ್ನು ನೀಡಿದೆ.