Wednesday, 14th May 2025

ಫಿಜಿಯಲ್ಲಿ 6.3 ತೀವ್ರತೆಯ ಭೂಕಂಪ

ಸುವಾ (ಫಿಜಿ): ಫಿಜಿಯಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಫಿಜಿ ದಕ್ಷಿಣ ಪೆಸಿಫಿಕ್‌ನಲ್ಲಿರುವ ಒಂದು ದೇಶ. ಇದು 300 ಕ್ಕೂ ಹೆಚ್ಚು ದ್ವೀಪಗಳ ಸಮೂಹವಾಗಿದೆ. ಫಿಜಿಯಲ್ಲಿ ಮಂಗಳವಾರ ಬೆಳಗ್ಗೆ ಭೂಮಿಯಿಂದ 569 ಕಿಮೀ ಆಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಒಂದು ವಾರದಲ್ಲಿ ಇದು ಎರಡನೇ ಭೂಕಂಪವಾಗಿದೆ. ಗುರುವಾರ, ಫಿಜಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.