Tuesday, 13th May 2025

ಕಂಗನಾಗೆ ಪದ್ಮಾವತಿಯ ಕಿವಿಮಾತು

ಬಾಲಿವುಡ್ ಅಂಗಳದಲ್ಲಿ ಕಂಗನಾ ರನೌತ್ ಜಟಾಪಟಿ ಜೋರಾಗಿದೆ. ಡ್ರಗ್ಸ್ ವಿಚಾರಕ್ಕೆ ಪ್ರಾರಂಭವಾದ ಈ ಜಟಾಪಟಿ ವೈಯಕ್ತಿಕ
ನಿಂಧನೆಗೂ ಕಾರಣವಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚರ್ಚೆಯನ್ನು ಗಮನಿಸಿದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ಕಂಗನಾಗೆ ಒಂದಿಷ್ಟು ಸಲಹೆ ನೀಡಿದ್ದಾರೆ.

ನಟಿ ಕಂಗನಾ, ಡ್ರಗ್ಸ್ ವ್ಯಸನಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಯಾವ ಪಟ್ಟಿಯನ್ನು ಬಹಿರಂಗಗೊಳಿಸಿಲ್ಲ. ಈ ಬಗ್ಗೆೆ ಸಲಹೆ ನೀಡಿರುವ ರಮ್ಯಾ, ಸಾಕ್ಷ್ಯಗಳಿದ್ದರೆ ಪೊಲೀಸರಿಗೆ ಕೊಡಿ, ಇಲ್ಲವೇ ವ್ಯಸನಿಗಳನ್ನು ವ್ಯಸನದಿಂದ ಹೊರತರುವ ಕೆಲಸ ಮಾಡಿ, ಅದನ್ನು ಬಿಟ್ಟು ಹೀಗೆ ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ
ಎಂದಿದ್ದಾರೆ.

ದೀಪಿಕಾ ಪಡುಕೋಣೆ, ಮಾನಸಿಕ ಆರೋಗ್ಯದ ಜಾಗೃತಿ ಹಾಗೂ ಖಿನ್ನತೆಗೆ ಒಳಪಟ್ಟಿರುವವರ ಸಹಾಯಕ್ಕೆಂದು ಸಂಘ ಸಂಸ್ಥೆ ಯೊಂದನ್ನು ಸ್ಥಾಪಿಸಿದ್ದಾರೆ. ಇದರಿಂದ ಲಕ್ಷಾಂತರ ಮಂದಿಗೆ ಸಹಾಯಕವಾಗುತ್ತಿದೆ. ನೀವು ಅವರನ್ನು ನೋಡಿ ಕಲಿಯಿರಿ ಎಂದಿದ್ದಾರೆ ರಮ್ಯಾ.  ನಾನೂ ಸಹ ಡ್ರಗ್ಸ್ ‌ ವ್ಯಸನಿ ಆಗಿದ್ದೆ ಎಂದು ವಿಡಿಯೊ ಒಂದರಲ್ಲಿ ಹೇಳಿದ್ದಿರಿ. ನೀವು ಧೈರ್ಯ ತೋರಿ ದ್ದೀರಿ. ನಿಮ್ಮ ಆ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸಿ ಎಂದು ಕಂಗಾನಾಗೆ ಕಿವಿಮಾತು ಹೇಳಿರುವ ರಮ್ಯಾ, ನಟ ಸಂಜಯ್ ದತ್ ಆ ಕೆಲಸವನ್ನು ಮಾಡಿದ್ದಾರೆ ಎಂದು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.

Leave a Reply

Your email address will not be published. Required fields are marked *