Tuesday, 13th May 2025

ಮಿಷನರಿಗಳಿಗಿಂತಲೂ ಹಿಂದೂ ಧಾರ್ಮಿಕ ಗುರುಗಳ ಸೇವೆ ಹೆಚ್ಚಿನದ್ದು

ನವದೆಹಲಿ: ದಕ್ಷಿಣದಲ್ಲಿನ 4 ರಾಜ್ಯಗಳಲ್ಲಿ ಹಿಂದೂ ಧಾರ್ಮಿಕ ಗುರುಗಳು ಮಾಡುತ್ತಿರುವ ಸೇವೆ ಮಿಷನರಿಗಳಿಗಿಂತಲೂ ಹೆಚ್ಚಿನದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಹೇಳಿದ್ದಾರೆ.
ರಾಷ್ಟ್ರೀಯ ಸೇವಾ ಸಂಗಮವನ್ನುದ್ದೇಶಿಸಿ ಮಾತನಾಡಿರುವ ಮೋಹನ್ ಭಾಗ್ವತ್, ಸೇವೆ ಆರೋಗ್ಯಕರ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ. ಸಮಾಜದ ಯಾವುದೇ ವರ್ಗ ವಂಚಿತವಾಗಿದ್ದರೆ, ದೇಶದ ಸುಧಾರಣೆಗೆ ಆ ವರ್ಗವನ್ನು ಮೇಲೆತ್ತಬೇಕು ಎಂದು ಮೋಹನ್ ಭಾಗ್ವತ್ ತಿಳಿಸಿದ್ದಾರೆ. ದೇಶದ ಬೌದ್ಧಿಕ ವಲಯದಲ್ಲಿರುವ ವ್ಯಕ್ತಿಗಳು ಸೇವೆಗಾಗಿ ಮಿಷನರಿಗಳನ್ನು ಉಲ್ಲೇಖಿಸುತ್ತಾರೆ.
ಆದರೆ ದಕ್ಷಿಣ ಭಾರತದಲ್ಲಿ ಹಿಂದೂ ಧಾರ್ಮಿಕ ಗುರುಗಳು ಮಾಡಿರುವ ಸೇವೆ ಮಿಷನರಿಗಳಿಗಿಂತಲೂ ಹೆಚ್ಚಿನದ್ದು ಎಂದು ಭಾಗ್ವತ್ ಹೇಳಿದ್ದಾರೆ.