Sunday, 11th May 2025

ಟ್ರ್ಯಾಕ್ಟರ್‌ಗೆ ಟೆಂಪೋ ಡಿಕ್ಕಿ: ನಾಲ್ವರ ಸಾವು

ಜೈಪುರ: ಅಕ್ರಮ ಮರಳು ಗಣಿಗಾರಿಕೆಗೆ ನಡೆಸುತ್ತಿದ್ದ ಟ್ರ್ಯಾಕ್ಟರ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮತ್ತು ಆತನ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ಸಂಭವಿಸಿದೆ.

ಅಲ್ವಾರ್‌ನ ಕಥೂಮರ್ ಪಟ್ಟಣದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ಕೋಪ ಗೊಂಡ ಗ್ರಾಮಸ್ಥರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿದರು ನಂತರ ಗ್ರಾಮಸ್ಥರು ಶವಗಳೊಂದಿಗೆ ರಸ್ತೆ ತಡೆದು ಪ್ರತಿಭಟಿಸಿದರು.

ಮರಳು ಮಾಫಿಯಾ ಮತ್ತು ಪೊಲೀಸರ ನಡುವೆ ನಂಟು ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಮನವೊಲಿಸಲು ಪ್ರಯತ್ನಿಸಿದರು ಆ ಬಳಿಕ ಗ್ರಾಮಸ್ಥರು ಶವಗಳನ್ನು ಶವಾಗಾರಕ್ಕೆ ಕೊಂಡೊಯ್ಯಲು ಪೊಲೀಸರಿಗೆ ಅನುವು ಮಾಡಿಕೊಟ್ಟರು.