Sunday, 11th May 2025

ಉದಯಪುರದಲ್ಲಿ ಜಿ20 ಅಧ್ಯಕ್ಷತೆಯಲ್ಲಿ ವಿತ್ತ ತಂಡದ ಸಭೆ ಇಂದು ಆರಂಭ

ರಾಜಸ್ಥಾನ್: ಭಾರತದ ಜಿ20 ಅಧ್ಯಕ್ಷತೆ ಅಡಿಯಲ್ಲಿ ವಿತ್ತ ತಂಡದ ಸಭೆಯು ಇಂದು ರಾಜಸ್ಥಾನದ ಉದಯಪುರದಲ್ಲಿ ಪ್ರಾರಂಭವಾಗಲಿದೆ.

ಮೂರು ದಿನಗಳ ಸಭೆಯು ಜಾಗತಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಸುಸ್ಥಿರ ಹಣಕಾಸು ಸಜ್ಜುಗೊಳಿಸುವ ಸಂಬಂಧಿತ ನೀತಿಗಳು ಮತ್ತು ಉತ್ತಮ ಅಭ್ಯಾಸಗಳ ಗುರುತಿಸುವಿಕೆಯ ಮೇಲೆ ಕೇಂದ್ರೀಕರಿಸುತ್ತದೆ.

ಸಭೆಯ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಎರಡು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಮೊದಲ ಕಾರ್ಯಾಗಾರವು ಸುಸ್ಥಿರ ಹೂಡಿಕೆಯನ್ನು ಬೆಂಬಲಿಸಲು ನಾನ್-ಪ್ರೈಸಿಂಗ್ ಪಾಲಿಸಿ ಲಿವರ್‌ಗಳ ಮೇಲೆ ಇರುತ್ತದೆ. ಎರಡನೇ ಕಾರ್ಯಾಗಾರವು ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಹಣಕಾಸು ಸಕ್ರಿಯಗೊಳಿಸುವ ಕುರಿತು ಕೇಂದ್ರೀಕರಿಸುತ್ತದೆ.

G20ನ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳಿಂದ 90ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಮೆಗಾ-ಈವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ.