Tuesday, 13th May 2025

ಮೆಕ್ಸಿಕನ್ ರಸಾಯನಶಾಸ್ತ್ರಜ್ಞ ಡಾ.ಮಾರಿಯೋ ಮೊಲಿನಾಗೆ ಡೂಡಲ್ ಗೌರವ

ಝೋನ್ ಪದರವನ್ನು ಉಳಿಸಲು ಮತ್ತು ಈ ವಿಷಯ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿದ ಮೆಕ್ಸಿಕನ್ ರಸಾಯನಶಾಸ್ತ್ರಜ್ಞ ಡಾ. ಮಾರಿಯೋ ಮೊಲಿನಾ ಅವರ 80ನೇ ಜನ್ಮ ವಾರ್ಷಿಕ ದಿನವನ್ನು ಡೂಡಲ್ ಮೂಲಕ ಗೂಗಲ್ ಇಂದು ಆಚರಿಸುತ್ತಿದೆ.

1995ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಡಾ. ಮೋಲಿನಾ ಅವರು ಕ್ಲೋರೋಫ್ಲೋರೋಕಾರ್ಬನ್‌ಗಳು ಓಝೋನ್​ಗೆ ಹಾನಿ ಉಂಟು ಮಾಡುತ್ತಿವೆ ಮತ್ತು ಭೂಮಿಯ ಮೇಲ್ಮೈಯನ್ನು ತಲುಪಲು ನೇರಳಾತೀತ ವಿಕಿರಣ ಉಂಟು ಮಾಡುತ್ತಿವೆ ಎಂದು ಕಂಡು ಹಿಡಿದವರಲ್ಲಿ ಮೊದಲಿಗರು. ಇದು ಮಾನವರು, ಸಸ್ಯಗಳು ಮತ್ತು ವನ್ಯಜೀವಿಗಳನ್ನು ಹಾನಿಕಾರಕ ನೇರಳಾತೀತ ಬೆಳಕಿನಿಂದ ರಕ್ಷಿಸಲು ಮುಖ್ಯ. ಓಝೋನ್ ಪದರ ಉಳಿಸಲು ಸರ್ಕಾರಗಳು ಒಗ್ಗೂಡುವಂತೆ ಮೋಲಿನಾ ಕರೆ ಕೊಟ್ಟಿದ್ದರು.

ಅಂತಹ ಮಹಾನ್‌ ವ್ಯಕ್ತಿಯ ಜನ್ಮದಿನವನ್ನು ಗೂಗಲ್‌ ಡೂಡಲ್‌ ಮೂಲಕ ವಿಶೇಷವಾಗಿ ಆಚರಿಸುತ್ತಿದೆ.