Sunday, 11th May 2025

ಅಮೃತಸರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಭೇಟಿ

ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಅಮೃತಸರಕ್ಕೆ ಭೇಟಿ ನೀಡಿದ್ದಾರೆ.

ಮುರ್ಮು ಅವರ ಪ್ರವಾಸದಲ್ಲಿ ಗೋಲ್ಡನ್ ಟೆಂಪಲ್, ಜಲಿಯನ್ ವಾಲಾ ಬಾಗ್, ದುರ್ಗಿಯಾನ ಟೆಂಪಲ್ ಮತ್ತು ಭಗವಾನ್ ವಾಲ್ಮೀಕಿ ರಾಮ್ ತೀರ್ಥ ಸ್ಥಳಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಮುರ್ಮು ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅಮೃತಸರ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.. ತದನಂತರ ಮುರ್ಮು ಅವರ ಒಂದು ದಿನದ ಪ್ರವಾಸಕ್ಕೆ ಸಿಎಂ ಮಾನ್ ಕೂಡ ಜೊತೆಯಾಗಿ ತೆರಳಿದರು.

ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪರ್ಮಿಂದರ್ ಸಿಂಗ್ ಭಂಡಾಲ್ ಮಾಹಿತಿ ನೀಡಿದ್ದಾರೆ.

ಶ್ರೀ ಗುರುರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋಲ್ಡನ್ ಟೆಂಪಲ್ ವರೆಗಿನ ಮಾರ್ಗವನ್ನು ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ನಿಷೇಧಿಸಲಾಗುವುದು ಮತ್ತು ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಈ ಮಾರ್ಗ ಸಂಚಾರ ನಿಷೇಧಿಸಲಾಗಿರುತ್ತದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪರ್ಮಿಂದರ್ ಸಿಂಗ್ ಭಂಡಾಲ್ ತಿಳಿಸಿದ್ದಾರೆ.