Wednesday, 14th May 2025

ಅಂತಿಮ ಟೆಸ್ಟ್ ಪಂದ್ಯಕ್ಕೆ ಪ್ರಧಾನಿ ಮೋದಿ-ಆಸ್ಟ್ರೇಲಿಯಾ ಪ್ರಧಾನಿ ಸಾಕ್ಷಿ

ಹಮದಾಬಾದ್: ಗುಜರಾತ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಅಂತೀಮ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನಿಸ್ ಸಾಕ್ಷಿಯಾದರು.

ಕ್ರೀಡಾಂಗಣಕ್ಕೆ ಆಗಮಿಸಿದ ಮೋದಿ ಹಾಗೂ ಅಲ್ಬನಿಸ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕ್ರೀಡಾಂಗಣದಲ್ಲಿ ರಥದಲ್ಲಿ ಸಾಗುತ್ತ ಪ್ರೇಕ್ಷಕರತ್ತ ಮೋದಿ ಹಾಗೂ ಅಲ್ಬನಿಸ್ ಕೈ ಬೀಸಿದರು. ನಂತರ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್‍ಗೆ ಟೆಸ್ಟ್ ಕ್ಯಾಪ್‍ಗಳನ್ನು ಹಸ್ತಾಂತರಿಸಿ ಹಸ್ತಲಾಘವ ಮಾಡಿದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಆಸ್ಟ್ರೇಲಿಯಾದ ಪ್ರಧಾನಿಯೊಂದಿಗೆ ಮಹಾತ್ಮ ಗಾಂಧಿ ಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಎರಡೂ ದೇಶಗಳನ್ನು ಒಂದಾಗಿಸುವ ಶಕ್ತಿ ಕ್ರಿಕೆಟ್‍ಗಿದೆ. ಅಹಮದಾಬಾದ್‍ನಲ್ಲಿ ಪಂದ್ಯಗಳ ಮೊದಲ ದಿನದಂದು ಭಾರತ ಮತ್ತು ಆಸ್ಟ್ರೇಲಿಯಾದ ನಾಯಕರನ್ನು ನೋಡುವುದು ಉತ್ತಮವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಹೈ ಕಮಿಷನರ್ ಬ್ಯಾರಿ ಓ’ಫಾರೆಲ್ ಹೇಳಿದ್ದಾರೆ.

ಬಾರ್ಡರ್ -ಗವಾಸ್ಕರ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಅಂತಿಮ ಟೆಸ್ಟ್‍ನಲ್ಲಿ ಗೆಲುವು ಸಾಧಿಸಿದರೆ ತಂಡವು ಐಸಿಸಿ ವಿಶ್ವ ಟೆಸ್ಟ ಚಾಂಪಿಯನ್‍ಶಿಪ್‍ನ ಫೈನಲ್‍ಗೆ ಅರ್ಹತೆ ಪಡೆಯುವುದನ್ನು ಖಚಿತಪಡಿಸುತ್ತದೆ.