Wednesday, 14th May 2025

ಸರಾಯಿ ನೀತಿ ಹಗರಣ: ಸಿಬಿಐನಿಂದ ಉಪಮುಖ್ಯಮಂತ್ರಿ ಸಿಸೋದಿಯ ವಿಚಾರಣೆ

ವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ದೆಹಲಿಯಲ್ಲಿನ ಸರಾಯಿ ನೀತಿ ಹಗರಣದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳದಿಂದ ವಿಚಾರಣೆ ಮಾಡಲಾಯಿತು.

ಅದಕ್ಕೂ ಮೊದಲು ಸಿಸೋದಿಯ ಇವರು ರಾಜಘಟಗೆ ಹೋಗಿ ಮ. ಗಾಂಧಿ ಇವರ ಸಮಾಧಿಯ ದರ್ಶನ ಪಡೆದು ಅವರ ಬೆಂಬಲಿಗರೊಂದಿಗೆ ‘ರೋಡ್ ಶೋ’ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಕಲಾಂ ೧೪೪ (ನಿಷೆಧಾಜ್ಞೆ) ಜಾರಿ ಮಾಡಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದರು.