Thursday, 15th May 2025

ಇಂದು ಅನನ್ಯ ಆಸ್ಪತ್ರೆಯಲ್ಲಿ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ

ಚಿಕ್ಕಬಳ್ಳಾಪುರ: ನಿವೃತ್ತ ಸರ್ಕಾರಿ ನೌಕರರಿಗೆ ಫೆ.೧೩ರಿಂದ ೧೫ ಮತ್ತು ಫೆ.೧೭ರಿಂದ ೧೮ ರವರೆಗೆ ನಗರದ ಅನನ್ಯ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಯುತ್ತದೆ. ನಿವೃತ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ.ಕೃಷ್ಣ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಐ.ಎಸ್.ರಾವ್ ಮತ್ತು ರಾಜೇಶ್ವರಿ ದಂಪತಿ ನಿವೃತ್ತ ನೌಕರರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದಾರೆ ಎಂದರು.

ಗುರುವಾರ (ಫೆ.೧೬) ಮಾತ್ರ ತಪಾಸಣೆ ನಡೆಯುವುದಿಲ್ಲ. ಆ ವಾರಪೂರ್ತಿ ತಪಾಸಣೆ ನಡೆಯು ತ್ತದೆ. ಹೃದಯ ಸಂಬಂಧಿ ಕಾಯಿಲೆಗಳು, ರಕ್ತದ ಒತ್ತಡ, ಮಧುಮೇಹ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸುವರು. ಜಿಲ್ಲೆಯಲ್ಲಿ ೩ ಸಾವಿರ ಮಂದಿ ಸಂಘದ ಸದಸ್ಯರು ಇದ್ದಾರೆ. ಈ ಸೌಲಭ್ಯ ವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಿಂದ ಪ್ರತಿ ತಿಂಗಳು ನಿವೃತ್ತ ನೌಕರರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಸಂಘದಿಂದ ನಡೆಸ ಲಾಗುತ್ತಿದೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ತಿರುಮಳಪ್ಪ, ಶ್ರೀನಿವಾಸರೆಡ್ಡಿ, ರಾಮಚಂದ್ರಪ್ಪ, ರಾಮಕೃಷ್ಣಪ್ಪ ಗೋಷ್ಠಿಯಲ್ಲಿ ಇದ್ದರು.