Wednesday, 14th May 2025

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಗಾ ಆಪ್ತನ ವಿಚಾರಣೆ

ವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಅಲಂಕಾರ್ ಸವಾಯಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿ ಕಾರಿಗಳು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಕ್ರೌಡ್ ಫಂಡಿಂಗ್ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರನ್ನು ಇತ್ತೀಚೆಗೆ ಗುಜರಾತ್‌ನಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಅಲಂಕಾರ್ ಸವಾಯಿ ಹೇಳಿಕೆಯನ್ನು ಇ.ಡಿ ದಾಖಲಿಸಿಕೊಂಡಿದೆ. ಈ ಸಂಬಂಧ ಅಲಂಕಾರ್ ಸವಾಯಿಗೆ ಸಮನ್ಸ್ ನೀಡಲಾಗಿತ್ತು.

35 ವರ್ಷದ ಗೋಖಲೆ ಅವರ ಖಾತೆಗೆ ಒಂದು ವರ್ಷದಲ್ಲಿ ₹23.54 ಲಕ್ಷ ನಗದು ರೂಪದಲ್ಲಿ ಜಮೆ ಮಾಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಕಾಂಗ್ರೆಸ್‌ನ ಸಾಮಾಜಿಕ ಜಾಲ ತಾಣದ ನಿರ್ವಹಣೆ ಮತ್ತು ಇತರೆ ಸಲಹೆಗಾಗಿ ಅಲಂಕಾರ್ ಸವಾಯಿ ನೀಡಿದ್ದರು ಎಂದು ಗೋಖಲೆ ಹೇಳಿಕೆ ನೀಡಿದ್ದರು.

ನಗದು ರೂಪದಲ್ಲೇ ಹಣ ನೀಡಿರುವುದೇಕೆ ಎಂದು ಕೇಳಿದಾಗ ಅದಕ್ಕೆ ಸವಾಯಿ ಅವರೇ ಉತ್ತರಿಸಬೇಕು ಎಂದು ಗೋಖಲೆ ಹೇಳಿ ರುವುದಾಗಿ ರಿಮಾಂಡ್ ವರದಿಯಲ್ಲಿ ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.