Thursday, 15th May 2025

ಜ.೨೮ರಂದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರಿಂದ ತಾಲೂಕಿನಲ್ಲಿ ಗ್ರಾಮವಾಸ್ತವ್ಯ

ಮಾನ್ವಿ: ಪಟ್ಟಣದ ಶಾಸಕರ ಕಾರ್ಯಲಯದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಾರತ್ನ ರಥಯಾತ್ರೆಯು ಮಾನ್ವಿ ತಾಲೂಕಿಗೆ ಜ.೨೮ರಂದು ಆಗಮಿಸಲಿದ್ದು ಸಿರವಾರ ಪಟ್ಟಣದಲ್ಲಿ ರಥಯಾತ್ರೆ ಸ್ವಾಗತಿಸಲಾಗುವುದು.

ನಂತರ ನೀರಮಾನ್ವಿ ಗ್ರಾಮದಲ್ಲಿನ ಶ್ರೀ ರೇಣುಕಾ ಯಲಮ್ಮ ದೇವಸ್ಥಾನದಲ್ಲಿ ದೇವಿಯ ದರ್ಶನ, ಮಾನ್ವಿ ಪಟ್ಟಣದಲ್ಲಿನ ಬಸವ ವೃತ್ತದಲ್ಲಿ ಸಾರ್ವಜನಿಕರೊಂದಿಗೆ ಸಂವಾದ, ಚೀಕಲಪರ್ವಿ ಗ್ರಾಮದ ಶ್ರೀ ರುದ್ರಮುನೀಶ್ವರ ಮಠಕ್ಕೆ ಭೇಟಿ , ಚಿಕ್ಕಕೋಟ್ನೆಕಲ್, ಅಮರೇಶ್ವರ ಕ್ಯಾಂಪ್, ಹಿರೇಕೊಟ್ನೆಕಲ್,ಬ್ಯಾಗವಾಟ್, ಬಾಗಲವಾಡ, ಕವಿತಾಳ,ಮಲ್ಲಟ.ಬಲ್ಲಟಗಿಯಲ್ಲಿ ರಾತ್ರಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜೆ.ಡಿ.ಎಸ್.ತಾ.ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ ,ನಾಗರಾಜ ಭೋಗವಾತಿ,ಖಲೀಲ್ ಕುರೇಶಿ ಸೇರಿದಂತೆ ಇತರರು ಇದ್ದರು.