Wednesday, 14th May 2025

11 ಕೋಟಿ ರೂಪಾಯಿ ಮೌಲ್ಯದ ಎಂಟು ಕೆಜಿ ಮಾದಕ ದ್ರವ್ಯ ವಶ

ಇಂಫಾಲ: ದೇಶದ ಗಡಿ ರಾಜ್ಯ ಮಣಿಪುರದಲ್ಲಿ ಅತ್ಯಧಿಕ ಮೊತ್ತದ ಬ್ರೌನ್‍ಶುಗರ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 11 ಕೋಟಿ ರೂಪಾಯಿ ಮೌಲ್ಯದ ಎಂಟು ಕೆಜಿ ಮಾದಕ ದ್ರವ್ಯವನ್ನು ಇಂಪಾಲ ಜಿಲ್ಲೆಯಲ್ಲಿ ವಶಪಡಿಸಿಕೊಂಡು, ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಲಾಗಿದೆ.

ನಿನ್ನೆ ರಾತ್ರಿ ಗ್ರೇಟರ್ ಇಂಫಾಲ್‍ನ ಕಿಯಾಮ್‍ಗೆಯ್ ಥೋಂಗ್‍ಖಾಂಗ್ ಪ್ರದೇಶದಿಂದ ಪೊಲೀಸರು ತಪಾಸಣೆ ನಡೆಸುವಾಗ ಎಂಟು ಪ್ಯಾಕೆಟ್‍ಗಳಲ್ಲಿ ಅಡಗಿಸಿಡಲಾಗಿದ್ದ ಮಾದಕ ವಸ್ತು ಪತ್ತೆಯಾಗಿದೆ. ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಲಾಗಿದ್ದು, ಮಾದಕ ವಸ್ತುಗಳು ಎಲ್ಲಿಂದ ತರಲಾಗಿತ್ತು.

ಕಳೆದ ವಾರ ಮಣಿಪುರದಲ್ಲಿ ಸುಮಾರು 10 ಕೆಜಿ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.