Monday, 12th May 2025

ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಪಿನ್ಸ್‌ ಆಯ್ಕೆ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಪಿನ್ಸ್‌ ಅವರನ್ನು ಆಯ್ಕೆ ಎಂದು ಆಡಳಿತಾರೂಢ ಲೇಬರ್‌ ಪಕ್ಷದ ಮೂಲಗಳು ತಿಳಿಸಿವೆ.

ದೇಶದ 41ನೇ ಪ್ರಧಾನಯಾಗಿ 44 ವರ್ಷದ ಕ್ರಿಸ್ ಹಿಪ್ಪಿನ್ಸ್‌ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. 42 ವರ್ಷದ ಜಸಿಂಡ ಆರ್ಡರ್ನ್ ಅವರು ದಿಢೀರ್ ರಾಜೀನಾಮೆ ಘೋಷಣೆ ಮಾಡಿದ ಬಳಿಕ, ಲೇಬರ್‌ ಪಕ್ಷ ಹಿಪ್ಪಿನ್ಸ್‌ ಅವರನ್ನು ಆಯ್ಕೆ ಮಾಡಿದೆ.

ಕ್ರಿಸ್ ಹಿಪ್ಪಿನ್ಸ್‌ ಅವರು ಜಸಿಂಡ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಅವರ ಕಾರ್ಯನಿರ್ವಹಣೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮುಂಬರುವ ಅಕ್ಟೋಬರ್‌ ತಿಂಗಳಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.