Monday, 12th May 2025

ಸಾಕ್ಷಿಗಳು ಬಲವಾಗಿದ್ದಲ್ಲಿ ಜಾಮೀನು ರದ್ದು ಮಾಡಬಹುದು: ಸುಪ್ರೀಂ

ವದೆಹಲಿ: ಸಾಕ್ಷಿಗಳು ಬಲವಾಗಿದಲ್ಲಿ ಆರೋಪಿಯ ಜಾಮೀನು ರದ್ದು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠವು, ಆರೋಪಿಯು ಜಾಮೀನು ರಹಿತ ಅಪರಾಧವೆಸಗಿದ್ದಾನೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗದ ಹೊರತು ಕೇವಲ ಚಾರ್ಜ್ ಶೀಟ್ ಸಲ್ಲಿಸುವುದರಿಂದ ರದ್ದತಿಯಾಗುವುದಿಲ್ಲ ಎಂದು ಹೇಳಿದೆ.

ಸಾಕ್ಷಿಗಳು ಬಲವಾಗಿದಲ್ಲಿ ಮತ್ತು ಜಾಮೀನು ರದ್ದುಗೊಳಿಸುವ ಮನವಿ ಯನ್ನು ಪರಿಗಣಿಸಲು ನ್ಯಾಯಾಲಯಗಳು ಅಡ್ಡಿಯಾಗ ದಿದ್ದರೆ ಆರೋಪಿಗೆ ನೀಡಲಾದ ಜಾಮೀನನ್ನು ಅರ್ಹತೆಯ ಆಧಾರದ ಮೇಲೆ ರದ್ದುಗೊಳಿಸಬಹುದು ಎಂದು ಪೀಠ ಹೇಳಿದೆ.

ಆಂಧ್ರಪ್ರದೇಶದ ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಆಂಧ್ರ ಪ್ರದೇಶದ ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರ ಅವರ ಕಿರಿಯ ಸಹೋದರನಾಗಿದ್ದು, ಹಾಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ. ಮಾರ್ಚ್ 15, 2019 ರಂದು ಪುಲಿವೆಂದುಲದಲ್ಲಿರುವ ಅವರ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.