ಉಸೇನ್ ಬೋಲ್ಟ್‌ರ ಹೂಡಿಕೆ ವ್ಯವಹಾರಗಳನ್ನು ನಿಭಾಯಿಸುವ ಕಂಪನಿ, ಮಾಜಿ ವೇಗದ ಓಟಗಾರ ಬೋಲ್ಟ್ ವಂಚನೆಗೊಳಗಾಗಿ ಮಿಲಿಯನ್‌ಗಟ್ಟಲೆ ಡಾಲರ್ ನಷ್ಟ ಅನುಭವಿಸಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಗೊಳಿ ಸಿದ್ದು, ಇದರ ಬೆನ್ನಿಗೇ ಸದರಿ ಕಂಪನಿಯ ಕಾರ್ಯನಿರ್ವಹಣೆ ಪ್ರಶ್ನೆಗೊಳ ಗಾಗಿದೆ.
ಉಸೇನ್ ಅವರ ಹೂಡಿಕೆ ವ್ಯವಹಾರಗಳನ್ನು ಸದರಿ ಆರ್ಥಿಕ ಕಂಪನಿಯು ಕಳೆದ ಒಂದು ದಶಕದಿಂದ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.
ಪ್ರಕರಣದ ಕುರಿತು ದೇಶದ ಆರ್ಥಿಕ ವ್ಯವಹಾರಗಳ ತನಿಖಾ ಸಂಸ್ಥೆಯಾದ ಆರ್ಥಿಕ ತನಿಖಾ ವಿಭಾಗ ತನಿಖೆ ನಡೆಸುತ್ತಿದ್ದು, ಈ ತನಿಖೆಗೆ ಪ್ರಶ್ನೆಗೊಳ ಗಾಗಿರುವ ಸ್ಟಾಕ್ಸ್ ಆಯಂಡ್ ಸೆಕ್ಯೂರಿಟೀಸ್ ಲಿಮಿಟೆಡ್ ಪೊಲೀಸರೊಂದಿಗೆ ಸಹಕರಿಸುತ್ತಿದೆ.
ತನಿಖೆಯು ಪ್ರಗತಿಯಲ್ಲಿರುವುದರಿಂದ, ಎಷ್ಟು ಮೊತ್ತವನ್ನು ಕಳೆದುಕೊಳ್ಳಲಾಗಿದೆ ಎಂದು ಬಯಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮುನ್ನ ಬುಧವಾರ ತಮ್ಮ ಖಾತೆಯಿಂದ ಮಿಲಿಯನ್‌ಗಟ್ಟಲೆ ಹಣ ಕಾಣೆಯಾಗಿರುವುದು ಉಸೇನ್ ಬೋಲ್ಟ್ ಗಮನಕ್ಕೆ ಬಂದಿತ್ತು.
ಪ್ರಕರಣದಲ್ಲಿ ಪ್ರಶ್ನೆಗೊಳಗಾಗಿರುವ ಉದ್ಯೋಗಿಯನ್ನು ಕಂಪನಿಯು ಈಗಾಗಲೇ ವಜಾಗೊಳಿಸಿದ್ದು, ಉಸೇನ್ ಬೋಲ್ಟ್ ಒಳಗೊಂಡಂತೆ ತಳಮಟ್ಟದಲ್ಲಿ ವ್ಯಾಪಕ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.