Wednesday, 14th May 2025

ಫೆಬ್ರವರಿ 4 ರಿಂದ ಹುಬ್ಬಳ್ಳಿ -ಪುಣೆ ನೇರ ವಿಮಾನ ಆರಂಭ

ಬೆಂಗಳೂರು: ಫೆಬ್ರವರಿ 4 ರಿಂದ ಹುಬ್ಬಳ್ಳಿ ಪುಣೆ ನೇರ ವಿಮಾನವನ್ನು ಪ್ರಾರಂಭಿಸಲು ಇಂಡಿಗೋ ನಿರ್ಧರಿಸಿದೆ.

ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಪ್ರಾಯಾಣಿಕ ರಿಂದ ನೇರ ವಿಮಾನದ ಬೇಡಿಕೆಯಿಂದಾಗಿ ಇಂಡಿಗೋ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ನೇರ ವಿಮಾನ ಹಾರಾಟ ಆರಂಭಿಸಲು ತೀರ್ಮಾನಿಸಿದೆ.

ಹುಬ್ಬಳ್ಳಿಯಿಂದ ಪುಣೆ ವಿಮಾನ (6E-7727) ಹುಬ್ಬಳ್ಳಿ ವಿಮಾನ ನಿಲ್ದಾಣ ದಿಂದ (HBX) ಫೆಬ್ರವರಿ 4 ರಂದು ಸಂಜೆ 6:30ಕ್ಕೆ ಹೊರಟು ಪುಣೆ ವಿಮಾನ ನಿಲ್ದಾಣವನ್ನು (PNQ) ಸಂಜೆ 7:40ಕ್ಕೆ ತಲುಪುತ್ತದೆ.

ಪುಣೆಯಿಂದ ಹುಬ್ಬಳ್ಳಿ ವಿಮಾನ (6E-7716) ರಾತ್ರಿ 8:00 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ ಹೊರಟು ರಾತ್ರಿ 9:10 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಇಂಡಿಗೋ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗಳು ತೆರೆದಿರುತ್ತವೆ.

ವಿಮಾನವು ವಾರಕ್ಕೆ 2 ದಿನಗಳಲ್ಲಿ ಮಾತ್ರ (ಶನಿವಾರ ಮತ್ತು ಭಾನುವಾರ) ಕಾರ್ಯನಿರ್ವಹಿಸುತ್ತದೆ. ಉತ್ತರ ಕರ್ನಾಟಕ ದಿಂದ ಪುಣೆ ಕಡೆಗೆ ಸಂಪರ್ಕ ಕಲ್ಪಿಸುವ ಏಕೈಕ ವಿಮಾನ ಆಗಿರುವುದರಿಂದ ವಿಮಾನಕ್ಕೆ ಉತ್ತಮ ಬೆಂಬಲ ಸಿಗುವ ಸಾಧ್ಯತೆ ಇದೆ.

ಪ್ರಯಾಣಿಕರ ಸಂಖ್ಯೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಇತ್ತೀಚೆಗೆ 3ನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿ ಯಾಗಿದೆ. ಇದು ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡಿತು.