Sunday, 11th May 2025

ಮೆಟ್ರೋ ಪಿಲ್ಲರ್ ದಿಢೀರ್‌ ಕುಸಿದು ತಾಯಿ, ಮಗು ಸಾವು

ಬೆಂಗಳೂರು: ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ದಿಢೀರ್‌ ಕುಸಿದಿದ್ದು ಸ್ಕೂಟಿಯಲ್ಲಿ ತೆರಳುತ್ತಿದ್ದ ತಾಯಿ ಮತ್ತು ಪುಟ್ಟ ಮಗು ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗಳ ಮೇಲೆಯೇ ಪಿಲ್ಲರ್‌ ಉರುಳಿತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಬ್ಬರೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತೇಜಸ್ವಿನಿ (28) ಮತ್ತು ಎರಡು ವರ್ಷ ಆರು ತಿಂಗಳ ಮಗು ವಿಹಾನ್‌ ಮೃತಪಟ್ಟ ದುರ್ದೈವಿಗಳು.

ಗಂಭೀರ ಗಾಯಗೊಂಡಿರುವ ತಾಯಿ-ಮಗಳನ್ನು ಸ್ಥಳೀಯರು ಆಲ್ಟಿಯಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೇಜಸ್ವಿನಿ ಅವರ ಪತಿಗೂ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.