Tuesday, 13th May 2025

ದುರ್ಗಾದೇವಿ, ಸಂತ ಸೇವಾಲಾಲ್ ಜಾತ್ರಾ ಮಹೋತ್ಸವ

ಕೊಲ್ಹಾರ: ಪಟ್ಟಣದಲ್ಲಿ ಬಂಜಾರ ಸಮಾಜದ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಸಂತ ಸೇವಾಲಾಲ್ ಹಾಗೂ ದುರ್ಗಾ ದೇವಿ ಜಾತ್ರಾ ಮಹೋತ್ಸವ ಆಚರಿಸಲಾಯಿತು.

ಪಟ್ಟಣದ ದಿಗಂಬರೇಶ್ವರ ಮಠದಿಂದ ಪ್ರಮುಖ ವೃತ್ತಗಳ ಮೂಲಕ ಸಂತ ಸೇವಾಲಾಲ್ ಹಾಗೂ ದುರ್ಗಾದೇವಿಯ ಮೂರ್ತಿಗಳ ಮೆರವಣಿಗೆ ನಡೆಯಿತು. ಬಂಜಾರ ಸಮಾಜದ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂ ಡಿದ್ದರು.

ಮೆರವಣಿಗೆಗೆ ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಪ.ಪಂ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಗಿಡ್ಡಪ್ಪಗೋಳ, ಬನಪ್ಪ ಬಾಲಗೊಂಡ, ಪ ಪಂ ಸದಸ್ಯ ಮಹಾಂತೇಶ ಗಿಡ್ಡಪ್ಪಗೋಳ, ಯಮನೂರಿ ಮಾಕಾಳಿ, ಕುಮಾರ್ ರಾಠೋಡ, ಅಶೋಕ ಜಿಡ್ಡಿಬಾಗಿಲ, ದಶರಥ ಈಟಿ ಹಾಗೂ ಬಂಜಾರ ಸಮಾಜದ ಮುಖಂಡರು, ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.