Monday, 12th May 2025

ಹಿಮಾಚಲ ಪ್ರದೇಶ ಸಚಿವ ಸಂಪುಟ ವಿಸ್ತರಣೆ

ಶಿಮ್ಲಾ: ಭಾನುವಾರ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸಚಿವ ಸಂಪುಟವನ್ನು ಏಳು ಸಚಿವರ ಸೇರ್ಪಡೆಯೊಂದಿಗೆ ವಿಸ್ತರಿಸಲಾಯಿತು. ಈ ಮೂಲಕ ಒಟ್ಟು ಒಂಬತ್ತು ಮಂದಿ ಸಂಪುಟದಲ್ಲಿದ್ದಾರೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಹೊಸದಾಗಿ ಸೇರ್ಪಡೆಗೊಂಡ ಸಚಿವರಲ್ಲಿ ಸೋಲನ್ನಿಂದ ಹಿರಿಯ ಶಾಸಕ ಧನಿ ರಾಮ್ ಶಾಂಡಿಲ್, ಕಾಂಗ್ರಾ ಜಿಲ್ಲೆಯ ಜವಾಲಿಯಿಂದ ಚಂದರ್ ಕುಮಾರ್, ಸಿರ್ಮೌರ್ ಜಿಲ್ಲೆಯ ಶಿಲ್ಲೈನಿಂದ ಹರ್ಷವರ್ಧನ್ ಚೌಹಾಣ್ ಮತ್ತು ಬುಡಕಟ್ಟು ಕಿನ್ನೌರ್ ಜಿಲ್ಲೆಯ ಜಗತ್ ಸಿಂಗ್ ನೇಗಿ ಸೇರಿದ್ದಾರೆ. ರೋಹಿತ್ ಠಾಕೂರ್, ಅನಿರುದ್ಧ್ ಸಿಂಗ್ ಮತ್ತು ಜುಬ್ಬಲ್-ಕೋಟ್ಖೈನ ವಿಕ್ರಮಾದಿತ್ಯ ಸಿಂಗ್ ಸಹ ನೂತನವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಮುಖ್ಯಮಂತ್ರಿ ಸುಖು ಮತ್ತು ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರು ಡಿಸೆಂಬರ್ 11, ೨೦೨೨ ರಂದು ಪ್ರಮಾಣ ವಚನ ಸ್ವೀಕರಿಸಿದರು.

Read E-Paper click here