Sunday, 11th May 2025

ದೆಹಲಿ ಪಾಲಿಕೆ ಮೇಯರ್ ಚುನಾವಣೆ: ಹಂಗಾಮಿ ಸ್ಪೀಕರ್ ನೇಮಕಕ್ಕೆ ವಿರೋಧ ವ್ಯಕ್ತ

ನವದೆಹಲಿ: ದೆಹಲಿಯ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಶುಕ್ರವಾರ ನಡೆಯ ಲಿದೆ.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಬಿಜೆಪಿ ನಾಯಕ ಸತ್ಯ ಶರ್ಮಾ ಅವರನ್ನು ಮೇಯರ್ ಚುನಾವಣೆಗೆ ಪುರಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಕ್ಕೆ ದೆಹಲಿ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸತ್ಯ ಶರ್ಮಾ ನೇತೃತ್ವದಲ್ಲಿ ಮೇಯರ್ ಚುನಾವಣೆ ನಡೆಯಲಿದೆ. ಇತ್ತೀಚೆಗಷ್ಟೇ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಎಎಪಿ ಗೆದ್ದಿರುವುದು ಗೊತ್ತೇ ಇದೆ. ಮೇಯರ್ ಸ್ಥಾನವನ್ನು ಆಮ್ ಆದ್ಮಿ ಪಕ್ಷ ಗೆಲ್ಲುವುದು ನಿಶ್ಚಿತ. ಆದಾಗ್ಯೂ, ಸತ್ಯ ಶರ್ಮಾ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ದೆಹಲಿ ಎಲ್‌ಜಿ ನಿರ್ಧಾರವನ್ನು ಎಎಪಿ ವಿರೋಧಿಸುತ್ತಿದೆ.

ಕಳೆದ ಡಿಸೆಂಬರ್ 4 ರಂದು ಚುನಾವಣೆ ನಡೆದಿದ್ದು, ಡಿಸೆಂಬರ್ 7 ರಂದು ಫಲಿತಾಂಶ ಪ್ರಕಟವಾಗಿತ್ತು.  ನೂತನವಾಗಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Read E-Paper click here