Tuesday, 13th May 2025

ಅಂತಿಮ ವಿಧಿ ವಿಧಾನ ನೆರವೇರಿಸಿ ಕರ್ತವ್ಯಕ್ಕೆ ಹಾಜರಾದ ಪ್ರಧಾನಿ

ಗಾಂಧಿನಗರ: ಮೋದಿಯವರ ತಾಯಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಗಾಂಧಿನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ. ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ನರೇಂದ್ರ ಮೋದಿ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿದ ನಂತರ ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾ ಬೆನ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಳಗಿನ ಜಾವ 3:30ಕ್ಕೆ ಹೀರಾ ಬೆನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದು, 9.30 ಗಂಟೆಯೊಳಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಯಥಾಸ್ಥಿತಿಯಾಗಿ ತಮ್ಮ ಕರ್ತವ್ಯ ಮುಂದುವರಿಸಿರುವ ಮೋದಿ ನಿಗದಿಯಂತೆ ದಿನವಿಡೀ ಪಶ್ಚಿಮ ಬಂಗಾಳದ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ತವ್ಯಕ್ಕೆ ಹಾಜರಾಗುವರು. ಕೆಲ ಹೊತ್ತಿನಲ್ಲಿ ಗುಜರಾತ್ ರಾಜಭವನ ತಲುಪಿದ ಪ್ರಧಾನಿ ಮೋದಿ ರಾಜಭವನದಲ್ಲಿ ಕುಳಿತು ಕಾರ್ಯನಿರ್ವಹಿಸಲಿದ್ದಾರೆ.

ಕೊಲ್ಕತ್ತಾದಲ್ಲಿ ಗಂಗಾನದಿ ಸ್ವಚ್ಛತೆ ಸಂಬಂಧ ಸಭೆ ನಡೆಸುವರು. ಪಶ್ಚಿಮ ಬಂಗಾಳದಲ್ಲಿ 2800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಭಾಗವಹಿಸುವರು.

Read E-Paper click here