Monday, 12th May 2025

ಮಾಜಿ ಸಂಸದೆ ಜಯಪ್ರದಾರಿಗೆ ಬಂಧನದ ವಾರಂಟ್‌

ರೇಲಿ: ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ಕೋರ್ಟ್‌ ಒಂದು ಮಾಜಿ ಸಂಸದೆ ಜಯಪ್ರದಾ ಅವರಿಗೆ ಬಂಧನದ ವಾರಂಟ್‌ ಹೊರಡಿಸಿದೆ.

2019ರ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿ ಸಿದ ಎರಡು ಪ್ರಕರಣಗಳಿಗೆ ಸಂಬಂಧಿಸಿ ದಂತೆ ಈ ಬೆಳವಣಿಗೆ ನಡೆದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಬಗ್ಗೆ ಆದೇಶ ಹೊರಡಿಸಿದೆ.

ಜ. 9ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಸರಕಾರಿ ವಕೀಲ ಅಮರನಾಥ್‌ ತಿವಾರಿ ಹೇಳಿದ್ದಾರೆ. ಜಿಲ್ಲೆಯ ಎರಡು ಠಾಣೆಗಳ ವ್ಯಾಪ್ತಿಯಲ್ಲಿ 2019ರ ಎ. 18 ಮತ್ತು ಎ. 19ರಂದು ಕೇಸು ದಾಖಲಿಸಲಾಗಿತ್ತು. 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು ಚುನಾವಣೆಯಲ್ಲಿ ಎಸ್‌ಪಿ ಮುಖಂಡ ಅಜಮ್‌ ಖಾನ್‌ ವಿರುದ್ಧ ಸೋಲು ಅನುಭವಿಸಿದ್ದರು.