Tuesday, 13th May 2025

ಬಿಲಾವಲ್ ಭುಟ್ಟೋ ಪ್ರತಿಕೃತಿ ಧಹಿಸಿ ಪ್ರತಿಭಟನೆ

ಕೊಲ್ಹಾರ: ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಿಲಾವಲ್ ಭುಟ್ಟೋ ಪ್ರತಿಕೃತಿ ದಹಸಿ ಪ್ರತಿಭಟನೆ ನಡೆಸಿದರು.

ಇಡೀ ವಿಶ್ವವೇ ಮೆಚ್ಚಿರುವ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ವಿರುದ್ಧ ಬಿಲಾವಲ್ ಭುಟ್ಟೋ ಅಸಭ್ಯ ಹೇಳಿಕೆ ಯನ್ನು ಸಹಿಸೋದಿಲ್ಲ, ವಿಶ್ವದಲ್ಲಿ ಭಾರತ ದೇಶದ ಬೆಳವಣಿಗೆಯನ್ನು ಸಹಿಸದೆ ಪಾಕಿಸ್ತಾನ ಪದೇಪದೇ ಇಂತಹ ಕುತಂತ್ರ ಬುದ್ಧಿ ಪ್ರಯೋಗಿಸು ತ್ತಿದ್ದು ಇದು ಸಹಿಸಲಸಾಧ್ಯ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಪ ಪಂ ಮಾಜಿ ಅಧ್ಯಕ್ಷ ವಿರುಪಾಕ್ಷೀ ಕೋಲಕಾರ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಸಗರಪ್ಪ ಮುರನಾಳ, ಶಿವಾನಂದ ಪತಂಗಿ, ಪ.ಪಂ ಸದಸ್ಯ ಬಾಬು ಬಜಂತ್ರಿ, ಅಪ್ಪಾಸಿ ಮಟ್ಯಾಳ, ವಿರಭದ್ರಪ್ಪ ಬಾಗಿ, ಮಹಾದೇವ ಹುಚ್ಚಪ್ಪಗೋಳ, ಲಕ್ಷ್ಮಣ ಬ್ಯಾಲ್ಯಾಳ, ಸುಭಾಸ ಬಜಂತ್ರಿ, ಡೋಂಗ್ರಿ ಕಟಬರ್ ಇತರರು ಇದ್ದರು.